ನವದೆಹಲಿ: ಪರಿಪೂರ್ಣ ಸಸ್ಯಾಹಾರಿಗಳಿಗಾಗಿ ಜೊಮಾಟೊ ಈ ಎರಡು ಸೇವೆ ಆರಂಭಿಸಿತ್ತು. ಪ್ಯೂರ್ ವೆಜ್ ಮೋಡ್ನಲ್ಲಿ ಬುಕ್ ಮಾಡಲಾಗುವ ಆಹಾರವನ್ನು ವೆಜ್ ಹೋಟೆಲ್ಗಳಿಂದ ಮಾತ್ರವೇ ಪಿಕಪ್ ಮಾಡಿ, ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತಿತ್ತು. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿತ್ತು. ಆದ್ದರಿಂದ ಈ ಸೇವೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ.
Maharashtra: ಜಂಕ್ʼಫುಡ್ ಜಾಸ್ತಿ ತಿನ್ನಬೇಡ ಎಂದ ತಂದೆ: ಮನನೊಂದು ಪ್ರಾಣ ಕಳೆದುಕೊಂಡ ಪುತ್ರಿ
ಈ ಬಗ್ಗೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು. ಜೊಮಾಟೊದ ಈ ಸೇವೆಯು ಜಾತೀಯತೆಯನ್ನು ಸೃಷ್ಟಿಸುತ್ತದೆ ಎಂಬುದು ಹೆಚ್ಚಿನ ಆಕ್ಷೇಪ. ಹೀಗಾಗಿ, ಜೊಮಾಟೊ ಈ ಎರಡು ಸೇವೆಗಳನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದೆ.
ಏನಿದು ಪ್ಯೂರ್ ವೆಜ್ ಮೋಡ್ ಮತ್ತು ಫ್ಲೀಟ್?
ಪರಿಪೂರ್ಣ ಸಸ್ಯಾಹಾರಿಗಳಿಗಾಗಿ ಜೊಮಾಟೊ ಈ ಎರಡು ಸೇವೆ ಆರಂಭಿಸಿತ್ತು. ಪ್ಯೂರ್ ವೆಜ್ ಮೋಡ್ನಲ್ಲಿ ಬುಕ್ ಮಾಡಲಾಗುವ ಆಹಾರವನ್ನು ವೆಜ್ ಹೋಟೆಲ್ಗಳಿಂದ ಮಾತ್ರವೇ ಪಿಕಪ್ ಮಾಡಿ, ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತದೆ. ಪ್ಯೂರ್ ವೆಜ್ ಫ್ಲೀಟ್ನಲ್ಲಿ, ಸಸ್ಯಾಹಾರದ ಡೆಲಿವರಿಗೆ ಪ್ರತ್ಯೇಕ ತಂಡವನ್ನು ಇಡಲಾಗುತ್ತದೆ.
ಮಾಮೂಲಿಯ ಜೊಮಾಟೋ ಡೆಲಿವರಿ ಬಾಯ್ಸ್ ಕೆಂಪು ಸಮವಸ್ತ್ರ ಧರಿಸಿದರೆ, ಪ್ಯೂರ್ ವೆಜ್ ಫ್ಲೀಟ್ನ ತಂಡದವರ ಯೂನಿಫಾರ್ಮ್ ಹಸಿರು ಬಣ್ಣದ್ದಾಗಿರುತ್ತದೆ. ಅಲ್ಲದೇ ಈ ತಂಡ ಕೇವಲ ಪ್ಯೂರ್ ವೆಜ್ ಆಹಾರವನ್ನು ಮಾತ್ರ ಡೆಲಿವರಿ ಮಾಡುತ್ತದೆ.