ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಬೈಟೆಡ್ಯಾನ್ಸ್ ಒಡೆತನದ ಟಿಕ್ಟಾಕ್ಗೆ ಯೂಟ್ಯೂಬ್ ಶಾರ್ಟ್ಸ್ ಪ್ರತಿಸ್ಪರ್ಧಿಯಾಗಿದೆ. ಅತಿ ವೇಗವಾಗಿ ಬಳಕೆದಾರರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು ಹೆಚ್ಚಿನ ಯೂಟ್ಯೂಬ್ ಬಳಕೆದಾರರು ಇದರ ಮೂಲಕ ಶಾರ್ಟ್ಸ್ಗಳನ್ನು ಶೇರ್ ಮಾಡುತ್ತಿರುತ್ತಾರೆ. ಈವರೆಗೆ 3 ನಿಮಿಷಗಳ ಕಾಲ ಶಾರ್ಟ್ಸ್ ಹಂಚಿಕೊಳ್ಳುವ ಅವಕಾಶ ಯೂಟ್ಯೂಬ್ ನೀಡಿತ್ತು. ಆದರೀಗ ಯೂಟ್ಯೂಬ್ ಅದರ ಕಾಲಮಿತಿಯನ್ನು ಹೆಚ್ಚಿಸುತ್ತಿದ್ದು, ಶಾರ್ಟ್ಸ್ಗಾಗಿ 6 ನಿಮಿಷಗಳ ಕಾಲವಕಾಶವನ್ನು ನೀಡಲಾಗುತ್ತಿದೆ.
ಅಕ್ಟೋಬರ್ 15ರಿಂದ 3 ನಿಮಿಷಗಳ ಕಾಲ ಶಾರ್ಟ್ಸ್ ವಿಡಿಯೋ ಪೋಸ್ಟ್ ಮಾಡಲು ಯೂಟ್ಯೂಬ್ ಅನುಮತಿಸುತ್ತಿದೆ. ಇದು ಜನಪ್ರಿಯತೆಯಲ್ಲಿರುವ ವೈಶಿಷ್ಟ್ಯವಾಗಿದೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.
ಯೂಟ್ಯೂಬ್ ಶಾರ್ಟ್ಸ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆಂದೇ ಹೆಚ್ಚಿನ ವೈಶಿಷ್ಟ್ಯ ಅಭಿವೃದ್ಧಿಪಡಿಸುತ್ತಿದೆ. ಟೆಂಪ್ಲೇಟ್ ಬಳಸಿಕೊಂಡು ಶಾರ್ಟ್ಸ್ ವಿಡಿಯೋ ತಯಾರಿಸುವ ಆಯ್ಕೆ ಸದ್ಯದಲ್ಲೇ ಪ್ರಾರಂಭವಾಗಲಿದೆ. ಜೊತೆಗೆ ಕ್ಲಿಪ್ ರಿಮಿಕ್ಸ್ ಆಯ್ಕೆ ಕೂಡ ಶೀಫ್ರದದಲ್ಲೇ ಬರಲಿದೆ.
ಇದಲ್ಲದೆ AI ಸಂಯೋಜನೆಯೊಂದಿಗೆ ವಿಡಿಯೋ ಸಂಯೋಜನೆ ಮಾಡಲಿದೆ. ಸ್ವತಂತ್ರ ಕ್ಲಿಪ್ ರಚಿಸಲು ಹೆಚ್ಚಿನ ಉತ್ತೇಜನ ನೀಡಲಿದೆ. ಒಟ್ಟಿನಲ್ಲಿ ಯೂಟ್ಯೂಬ್ ಬಳಕೆದಾರರಿಗೆ ಅನುಗುಣವಾಗಿ ಹೊಸ ಹೊಸ ಫೀಚರ್ ಪರಿಚಯಿಸುವ ಉದ್ದೇಶವನ್ನು ಶಾರ್ಟ್ಸ್ ಹೊಂದಿದೆ.