ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯು ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ಇಂದಿನಿಂದ ಮತ್ತಷ್ಟು ದುಬಾರಿ ದುನಿಯಾ ಆಗಲಿದೆ. ಮಳೆಗಾಲಕ್ಕಾಗಿಯೇ ವಿವಿಧ ಬಗೆಯ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಪಾದರಕ್ಷೆಗಳು ಲಭ್ಯವಿದೆ.ಇಂದಿನಿಂದ ಬಿಐಎಸ್ನ ಗುಣಮಟ್ಟ ನಿಯಂತ್ರಣ ಆದೇಶ ಜಾರಿಗೆ ಬರುತ್ತದೆ. ಪಾದರಕ್ಷೆ ತಯಾರಕರು ಹೊಸ ಗುಣಮಟ್ಟ ನಿಯಮಗಳಿಗೆ ಒಳಪಡುವುದು ಕಡ್ಡಾಯವಾಗಿರುತ್ತದೆ.
ಈ ಕಾರಣಕ್ಕೆ ಚಪ್ಪಲಿ, ಶೂಗಳ ತಯಾರಿಕೆಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಬೆಲೆ ಹೆಚ್ಚಳ ಸಂಭವ ಇದೆ. ಪಾದರಕ್ಷೆ ತಯಾರಿಕೆಗೆ ಬಳಸುವ ಪ್ರತಿಯೊಂದು ವಸ್ತುವೂ ನಿರ್ದಿಷ್ಟ ಗುಣಮಟ್ಟವಾದರೂ ಹೊಂದಿರಬೇಕು. ಐಎಸ್ 6721 ಮತ್ತು ಐಎಸ್ 10702 ಮಾನದಂಡದ ಪ್ರಕಾರ ಈ ವಸ್ತುವಿನ ಗುಣಮಟ್ಟ ಇರಬೇಕು. ಕಠಿಣ ಗುಣಮಟ್ಟ ಪರೀಕ್ಷೆಗಳಿಗೆ ಇವುಗಳನ್ನು ಒಳಪಡಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಪಾದರಕ್ಷೆಗಳನ್ನು ತೊಡೆದು ಹಾಕುವುದು ಈ ಯೋಜನೆಯ ಉದ್ದೇಶ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ
ಈಗಿರುವ ಹಳೆಯ ಪಾದರಕ್ಷೆಗಳು ಏನಾಗುತ್ತವೆ?
ಇನ್ಮುಂದೆ ಮಾರುಕಟ್ಟೆಗೆ ಬರುವ ಪಾದರಕ್ಷೆಗಳಿಗೆ ಬಿಐಎಸ್ ಸ್ಟ್ಯಾಂಡರ್ಡ್ ಅನ್ನು ಕಡ್ಡಾಯ ಪಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಪಾದರಕ್ಷೆಗಳ ಲೆಕ್ಕವನ್ನು ಬಿಐಎಸ್ ವೆಬ್ಸೈಟ್ನಲ್ಲಿ ನೊಂದಾಯಿಸಿ ಕೊಡಬೇಕು. ಆ ಬಳಿಕ ಈ ಹಳೆಯ ಪಾದರಕ್ಷೆಗಳನ್ನು ಹಳೆಯ ಬೆಲೆಯಲ್ಲೇ ಮಾರಾಟ ಮಾಡಲು ಕಾಲಾವಕಾಶ ಕಲ್ಪಿಸಲಾಗಿದೆ.
ಪಾದರಕ್ಷೆ ತಯಾರಿಕೆಗೆ ಬೇಕಾದ ಕಚ್ಛಾ ಸಾಮಗ್ರಿಯಿಂದ ಹಿಡಿದು, ಅದರ ತಯಾರಿಕೆ ವಿಧಾನ ಹಾಗೂ ಉತ್ಪನ್ನದ ಒಟ್ಟಾರೆ ಬಳಿಕೆ ಇವೆಲ್ಲವೂ ಬಿಐಎಸ್ ಸ್ಟ್ಯಾಂಡರ್ಡ್ ನಿಯಮಗಳಿಗೆ ಒಳಪಡಬೇಕಾಗುತ್ತದೆ. ಇದರಿಂದ ಸಹಜವಾಗಿ ತಯಾರಿಕೆಯ ವೆಚ್ಚ ಹೆಚ್ಚಾಗಲಿದೆ. ಆ ಮೂಲಕ ಪಾದರಕ್ಷೆಗಳ ಬೆಲೆಗಳೂ ಹೆಚ್ಚಲಿವೆ. ಪರಿಷ್ಕೃತ ಬಿಐಎಸ್ ನಿಯಮಗಳಿಗೆ ಒಟ್ಟು 46 ಪಾದರಕ್ಷೆ ಉತ್ಪನ್ನಗಳನ್ನು ಸೇರಿಸಲಾಗಿದೆ.