ಸಕ್ಕರೆ ಕಾಯಿಲೆ ಇರುವವರು ಆಗಾಗ ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿದಿನ ಸಲಾಡ್ನಲ್ಲಿ ಹಸಿರು ಈರುಳ್ಳಿಯನ್ನು ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಹಿಂಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಂಬೆ ರಸದಲ್ಲಿ ನೆನೆಸಿದ ಈರುಳ್ಳಿ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಿದೆ.
ಕರ್ನಾಟಕಕ್ಕೆ ತಮಿಳುನಾಡಿಗಿಂತ ಕಡಿಮೆ ಹಣ ಕೊಟ್ಟಿರೋದಕ್ಕೆ ನಮಗೆ ನಾಚಿಕೆ ಆಗುತ್ತದೆ: ಸಚಿವ ಜಿ.ಪರಮೇಶ್ವರ್
ತಜ್ಞರ ಪ್ರಕಾರ,..ಹಸಿ ಈರುಳ್ಳಿಯನ್ನು ನಿಂಬೆ ರಸದೊಂದಿಗೆ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅತ್ಯುತ್ತಮ ಆರಂಭಿಕ ಎಂದು ಹೇಳಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಈರುಳ್ಳಿ ಸಲಾಡ್, ಚಟ್ನಿ, ತರಕಾರಿ ಗ್ರೇವಿ ಹೀಗೆ ಯಾವುದೇ ರೂಪದಲ್ಲಿ ತಿನ್ನಬಹುದು. ಇದು ಆರೋಗ್ಯಕ್ಕೆ ಪ್ರಯೋಜನಕಾರಿ.
ಈರುಳ್ಳಿ ಕ್ರೋಮಿಯಂ ಮತ್ತು ಸಲ್ಫರ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೋಂಕುಗಳಿಂದ ರಕ್ಷಿಸುತ್ತದೆ.
ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಹಸಿ ಈರುಳ್ಳಿ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ನಿಂಬೆ ರಸದಲ್ಲಿ ನೆನೆಸಿದ ಈರುಳ್ಳಿ ರಸವನ್ನು ತಿಂದರೆ ಸಕ್ಕರೆಯ ಮಟ್ಟವು ತಕ್ಷಣವೇ ಕಡಿಮೆಯಾಗುತ್ತದೆ.
ಅಡುಗೆ ಮನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಗ ಹಲವಾರು ಬಗೆಯ ಮನೆಮದ್ದುಗಳು ಕಾಣಲು ಸಿಗುವುದು. ನಾವು ನಿತ್ಯವೂ ಅಡುಗೆಯಲ್ಲಿ ಬಳಕೆ ಮಾಡುವಂತಹ ಈರುಳ್ಳಿ ಕೂಡ ಇದರಲ್ಲಿ ಒಂದು. ಈರುಳ್ಳಿಯು ಯಾವುದೇ ಖಾದ್ಯಕ್ಕೆ ಒಳ್ಳೆಯ ರುಚಿ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಇದು ಒಳ್ಳೆಯದು. ಈರುಳ್ಳಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇದ್ದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಈರುಳ್ಳಿಯನ್ನು ಆಹಾರ ಕ್ರಮದಲ್ಲಿ ನಿತ್ಯವೂ ಬಳಸಿದರೆ ಆಗ ಇದು ಜೀರ್ಣಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು. ಇದು ಕರುಳಿನ ಕ್ರಿಯೆ ಸರಾಗವಾಗಿಸುವುದು ಮತ್ತು ಮಲಬದ್ಧತೆ ನಿವಾರಿಸುವುದು. ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು ಮತ್ತು ಹೃದಯದ ಕಾಯಿಲೆ ಅಪಾಯ ಕಡಿಮೆ ಮಾಡುವುದು. ಇದರಲ್ಲಿ ಇರುವ ಕರಗುವ ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಸಹಕಾರಿ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ಈರುಳ್ಳಿಯಲ್ಲಿ ಫ್ಲಾವನಾಯ್ಡ್ ಮತ್ತು ಸಲ್ಫರ್ ಅಂಶವು ಉತ್ತಮ ಪ್ರಮಾಣದಲ್ಲಿದೆ. ಇದೆಲ್ಲವೂ ಉರಿಯೂತ ಶಮನಕಾರಿ ಗುಣ ಹೊಂದಿವೆ. ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಇದು ಸಹಕಾರಿ. ಹೃದಯದ ಕಾಯಿಲೆ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ನ್ನು ಇದು ತಡೆಯುವುದು.
ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಉತ್ತಮ ಪ್ರಮಾಣದಲ್ಲಿದೆ. ಇದು ಚಯಾಪಚಯ ವೃದ್ಧಿಸುವುದು ಮತ್ತು ನರ ವ್ಯವಸ್ಥೆಯನ್ನು ಸುಧಾರಿಸುವುದು. ಈರುಳ್ಳಿ ಸೇವನೆ ಮಾಡಿದರೆ ಆಗ ಇದರಿಂದ ಸಂಪೂರ್ಣ ವಿಟಮಿನ್ ಸೇವನೆ ಹೆಚ್ಚಾಗುವುದು. ಮುಂದಿನ ಸಲ ನಿಮ್ಮ ಖಾದ್ಯಕ್ಕೆ ಈರುಳ್ಳಿ ಹಾಕುವುದನ್ನು ಮರೆಯಬೇಡಿ.
ಈರುಳ್ಳಿಯಲ್ಲಿ ಇನುಲಿನ್ ಎನ್ನುವ ನಾರಿನಾಂಶವಿದೆ ಮತ್ತು ಪ್ರಿಬಯೋಟಿಕ್ ಆಗಿ ಕೆಲಸ ಮಾಡುವುದು. ಪ್ರಿಬಯೋಟಿಕ್ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗೆ ಲಾಭಕಾರಿ ಮತ್ತು ಇದು ಜೀರ್ಣಕ್ರಿಯೆ ಸುಧಾರಿಸಿ, ಪೋಷಕಾಂಶಗಳ ಹೀರುವಿಕೆ ಹೆಚ್ಚಿಸುವುದು ಮತ್ತು ಹೊಟ್ಟೆಯ ಸಂಪೂರ್ಣ ಆರೋಗ್ಯ ಕಾಪಾಡುವುದು. ಈರುಳ್ಳಿಯನ್ನು ನಿತ್ಯವೂ ಸೇವನೆ ಮಾಡಿದರೆ ಇದು ಹೊಟ್ಟೆಯ ಬ್ಯಾಕ್ಟೀರಿಯಾದ ಸಮತೋಲನ ಕಾಪಾಡುವುದು
ಈರುಳ್ಳಿಯಲ್ಲಿ ಇರುವ ಕೆಲವು ಅಂಶಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಈರುಳ್ಳಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ತಗ್ಗಿಸುವುದು. ಆಹಾರದಲ್ಲಿ ಈರುಳ್ಳಿ ಬಳಸಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಕಾರಿ ಆಗುವುದು.
ಮೂಳೆಯ ಆರೋಗ್ಯಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಈರುಳ್ಳಿಯಲ್ಲಿ ಉತ್ತಮ ಮಟ್ಟದಲ್ಲಿ ಇದೆ. ಇದರಲ್ಲಿನ ಕ್ವೆರ್ಸೆಟಿನ್ ಮತ್ತು ಸಲ್ಫರ್ ಅಂಶವು ಮೂಳೆಯ ಸಾಂದ್ರತೆ ಕಾಪಾಡುವುದು ಮತ್ತು ಮೂಳೆಯ ಹಾನಿ ತಪ್ಪಿಸುವುದು. ಈರುಳ್ಳಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಮೂಳೆಯ ಆರೋಗ್ಯವು ಉತ್ತಮವಾಗುವುದು ಮತ್ತು ಅಸ್ಥಿರಂಧ್ರತೆಯ ಅಪಾಯವು ಕಡಿಮೆ ಆಗುವುದು.
ಈರುಳ್ಳಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇದೆ. ಅಲಿಸಿನ್ ಮತ್ತು ಸಲ್ಫರ್ ನಂತಹ ಅಂಶಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣ ಹೊಂದಿದೆ. ನಿಯಮಿತವಾಗಿ ಈರುಳ್ಳಿ ಸೇವನೆ ಮಾಡಿದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಸಾಮಾನ್ಯ ಸೋಂಕಿನಿಂದ ರಕ್ಷಣೆ ನೀಡುವುದು.