ಬೆಂಗಳೂರು:- ಕಾಲೇಜು ಯುವತಿಯರೇ ಎಚ್ಚರ, ಎಚ್ಚರ. ನೀವು 2 ನಿಮಿಷ ಫ್ರೀ ಮಾಡ್ಕೊಂಡು ಈ ಸುದ್ದಿ ಓದಿ. ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್ ಮಾಡಿದ್ದಾರೆ.
ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್!
ತೇಜಸ್ ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು ಬಂಧಿತನಿಂದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತೇಜಸ್ ಮೊದ ಮೊದಲು ಒಳ್ಳೆಯವನಂತೆ ನಟಿಸಿ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗ್ತಿದ್ದ. ಹೋಗ್ತಾ ಹೋಗ್ತಾ ಯುವತಿಯ ಸೀಕ್ರೆಟ್ ಎಲ್ಲವನ್ನೂ ತಿಳಿದುಕೊಂಡಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ತೆಗೆದು ಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದ. ಸ್ನೇಹಿತನ ಜೊತೆಗಿನ ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದ.
ಪ್ರೀತಿ ಮಾಡ್ತಿದ್ದೀಯಾ? ನೀನು ಕಾಲೇಜಿಗೆ ಹೋಗದಂತೆ ಮಾಡ್ತಿನಿ ಎಂದು ಬ್ಲಾಕ್ ಮೇಲ್ ಮಾಡಿ ಹೇಳಬಾರದೆಂದರೆ ಹಣ, ಚಿನ್ನ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಅಲ್ಲದೆ ಕಾಲೇಜು ಹಾಗೂ ಮನೆ ಬಳಿ ಬಂದು ಯುವತಿಯನ್ನು ಹೆದರಿಸಿದ್ದಾನೆ. ಇದರಿಂದ ಹೆದರಿದ್ದ ಯುವತಿ ಮನೆಯಲ್ಲಿದ್ದ ಚಿನ್ನ ತಂದು ತೇಜಸ್ಗೆ ನೀಡಿದ್ದಳು. ಹಂತ ಹಂತವಾಗಿ ಆರೋಪಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾನೆ. ಇನ್ನು ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರೋದು ಯುವತಿ ತಾಯಿ ಗಮನಕ್ಕೆ ಬಂದಿದ್ದು ಮಗಳನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.