ಬೆಂಗಳೂರು:- ರಾಜಧಾನಿ ಬೆಂಗಳೂರಿನ ಪೀಣ್ಯಾದ HMTಲೇಔಟ್ನಲ್ಲಿ ಜ್ಯೂಸ್ ಕುಡಿದುಕೊಂಡು ವಾಪಸ್ ಬರುತ್ತಿದ್ದ ಯುವತಿಯ ಎದೆ ಮುಟ್ಟಿ ವಿಕೃತಿ ಮರೆದಿರುವ ಘಟನೆ ಜರುಗಿದೆ.
ಯುವತಿ, ಪೀಣ್ಯಾದ HMTಲೇಔಟ್ ನಲ್ಲಿ ರಾತ್ರಿ 9:45ರ ಸುಮಾರಿಗೆ ಜ್ಯೂಸ್ ಕುಡಿದು ವಾಪಸ್ ಪಿಜಿಗೆ ತೆರಳುವಾಗ ದುರುಳನೋರ್ವ ಆಕೆಯ ಎದೆ ಭಾಗಕ್ಕೆ ಮುಟ್ಟಿದ್ದಾನೆ. ಬಳಿಕ ಯುವತಿ ಕಿರುಚಾಡಿದ್ದರಿಂದ ಕಾಮುಕ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ. ಇನ್ನು ಯುವತಿಯ ಎದೆಯನ್ನು ಟಚ್ ಮಾಡಿ ವಿಕೃತಿ ಮೆರೆದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ದೂರಿನ ಮೇರೆಗೆ ಇದೀಗ ಪರಾರಿಯಾಗಿರುವ ಆರೋಪಿ ವಿರುದ್ಧ IPC 354(a),354 ಅಡಿಯಲ್ಲಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.