ದೊಡ್ಡಬಳ್ಳಾಪುರ: ನಾನು ಯಾರಿಗೂ ಮೋಸ ಮಾಡಿಲ್ಲ, ಮಿಸ್ ಯೂ ಆಲ್ ಫ್ರೆಂಡ್ಸ್, ಬುಜ್ಜಿ ಐ ಮಿಸ್ ಯೂ.. ನಾನು ಇನ್ನೂ ಈ ಲೋಕವನ್ನೇ ಬಿಟ್ಟು ಹೋಗುತ್ತಿದ್ದೇನೆ, ಎಲ್ಲರು ಖುಷಿಯಾಗಿರಿ. ಎಂದು ಡೆತ್ ನೋಟ್ ಬರೆದ ಯುವತಿ ನೇಣಿಗೆ ಶರಣಾಗಿದ್ದಾಳೆ.
ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ, ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಜಾನ್ಸಿ(17) ನೇಣಿಗೆ ಶರಣಾಗಿದ್ದಾಳೆ, ನಿನ್ನೆ ಸಂಜೆ ಕಾಲೇಜ್ ನಿಂದ ಮನೆಗೆ ಬಂದ ಆಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Bengaluru: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ – ಯುವತಿ ಅಡ್ಡಗಟ್ಟಿ ಯುವಕರ ಪುಂಡಾಟ
ಮೃತ ಯುವತಿ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಮಕ್ಕಳನ್ನ ಕಷ್ಟಪಟ್ಟು ಓದಿಸುತ್ತಿದ್ದರು, ಆದರೆ ಆಕೆಯ ಮನಸ್ಸಿಗೆ ಯಾವ ವಿಚಾರ ಬೇಸರ ಜಿಗುಪ್ಸೆ ತಂದಿತ್ತೋ, ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೇಕ್ಟರ್ ಅಮರೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.