ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುತ್ತಿದ್ದಂತೆ ನಿವೃತ್ತಿಯಾಹಿದ್ದಾರೆ. ಅಶ್ವಿನ್ ನಿವೃತ್ತಿ ವಿಷಯ ಹಿಂದಿನಿಂದಲೂ ಕೇಳಿಬರುತ್ತಿತ್ತು. ಅವರು 2023 ರಲ್ಲಿ ಸ್ವದೇಶದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಈ ಮಾತು ಮೊದಲು ಕಾಣಿಸಿಕೊಂಡಿತ್ತು. ಇದೀಗ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಅಶ್ವಿನ್ ತಮ್ಮ ಸ್ಥಾನ ತ್ಯಜಿಸಿದ್ದಾರೆ.
ಇದೀಗ ಆರ್ ಅಶ್ವಿನ್ ಅವರ ಸ್ಥಾನಕ್ಕೆ ಯುವ ಸ್ಪಿನ್ನರ್ನನ್ನು ಆಯ್ಕೆ ಮಾಡಲಾಗಿದೆ. ಕೋಟ್ಯಾನ್ ಭಾರತೀಯ ದೇಶೀಯ ಸರ್ಕ್ಯೂಟ್ನಲ್ಲಿ ಅತ್ಯುತ್ತಮ ಆಫ್ ಸ್ಪಿನ್ನಿಂಗ್ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಈ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ಎ ತಂಡದ ಭಾಗವಾಗಿದ್ದರು.
ಕಹಿಯಾಗಿದ್ದರೂ ಈ ಜ್ಯೂಸ್ ಅಮೃತಕ್ಕೆ ಸಮಾನ: ಹಾಗಲಕಾಯಿ ಜ್ಯೂಸ್ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ..!?
ಮುಂಬೈನ ತನುಷ್ ಕೋಟ್ಯಾನ್ ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವು ಇಲ್ಲಿಯವರೆಗೆ ಅದ್ಭುತವಾಗಿದೆ. ಅವರು 33 ಪಂದ್ಯಗಳಲ್ಲಿ 101 ವಿಕೆಟ್ ಪಡೆದಿದ್ದಾರೆ. ಕೋಟ್ಯಾನ್ ಇದುವರೆಗೆ ಬ್ಯಾಟ್ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ. 2 ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 1525 ರನ್ ಗಳಿಸಿದ್ದಾರೆ. ತನುಷ್ ಆಡಿದ 20 ಲಿಸ್ಟ್ ಎ ಪಂದ್ಯಗಳಲ್ಲಿ 20 ವಿಕೆಟ್ ಮತ್ತು 90 ರನ್ ಗಳಿಸಿದ್ದಾರೆ. 33 ಟಿ20ಗಳಲ್ಲಿ 6.39 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು 33 ವಿಕೆಟ್ ಮತ್ತು 87 ರನ್ ಗಳಿಸಿದ್ದಾರೆ.
ತನುಷ್ ಕೋಟ್ಯಾನ್ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಅವರು ಕೇವಲ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು. ಅದರಲ್ಲಿ ಅವರು 24 ರನ್ ಗಳಿಸಿದರು. ಕೋಟ್ಯಾನ್ ಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದಾಗ್ಯೂ, ತನುಷ್ ಕೋಟ್ಯಾನ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದರು.