2023ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಕೆಲ ಯುವ ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲರ್ ಮೂಲಕ ಯುವ ಆಟಗಾರರು ಭವಿಷ್ಯದ ಸ್ಟಾರ್ಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಮುಖೇಶ್ ಕುಮಾರ್ ಸೇರಿದಂತೆಡ ಅಗ್ರ ಐವರು ಯುವ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
1.ಜಿತೇಶ್ ಶರ್ಮಾ
ಪಂಜಾಬ್ ಕಿಂಗ್ಸ್ನ 27ರ ಪ್ರಾಯದ ಯುವ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ, ಫಿನಿಷಿಂಗ್ ಹಾಗೂ ಕ್ಲೀನ್ ಹಿಟ್ಟಿಂಗ್ ಮೂಲಕ ಗಮನ ಸೆಳೆದಿದ್ದಾರೆ
2. ರಿಂಕು ಸಿಂಗ್
ಕಳೆದ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ಗೆ ಪಂದ್ಯ ಗೆಲ್ಲಿಸುವ ಮೂಲಕ ಗ್ರೇಟ್ ಫಿನಿಷರ್ ಆಗಿದ್ದಾರೆ. 26ರ ಹರೆಯದ ರಿಂಕು ಸಿಂಗ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ತಮ್ಮ ಆಕ್ರಮಣಕಾರಿ ಹೊಡೆತಗಳ ಮೂಲಕ ಮ್ಯಾಚ್ ಫಿನಿಷರ್ ಎಂಬ ಕೀರ್ತಿಯನ್ನು ಸಂಪಾದಿಸಿದ್ದಾರೆ
3. ಯಶಸ್ವಿ ಜೈಸ್ವಾಲ್
2023ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ನ 21ರ ಪ್ರಾಯದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್, ತಮ್ಮ ಭಯಮುಕ್ತ ಬ್ಯಾಟಿಂಗ್ ನಡೆಸಿ 14 ಪಂದ್ಯಗಳಲ್ಲಿ 625 ರನ್ ಗಳಿಸಿದ್ದರು.
4.ತಿಲಕ್ ವರ್ಮಾ
21ರ ಪ್ರಾಯದ ತಿಲಕ್ ವರ್ಮಾ ತಮ್ಮ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ತಮ್ಮ ಬ್ಯಾಟಿಂಗ್ನಲ್ಲಿ ತೋರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪದಾರ್ಪಣೆ ಪಂದ್ಯದಲ್ಲೇ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.
5. ಮುಖೇಶ್ ಕುಮಾರ್
ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದಂತಹ ಬೌನ್ಸಿ ಪಿಚ್ಗಳಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮತ್ತು ನಿರ್ಣಾಯಕ ವಿಕೆಟ್ ಪಡೆಯುವ ಕೌಶಲ ಪ್ರದರ್ಶಿಸಿರುವ 25ರ ಪ್ರಾಯದ ಯುವ ವೇಗಿ ಮುಖೇಶ್ ಕುಮಾರ್