ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದರೆ ನೀವು ನಂಬುತ್ತೀರಾ.? ಹೌದು, ಕೆಲವೊಮ್ಮೆ ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಋಣಾತ್ಮಕ ಹಾಗೂ ಧನಾತ್ಮಕ ಪ್ರಭಾವ ಬೀರುತ್ತದೆ. ನಮ್ಮ ಶಾಸ್ತ್ರದಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ. ನಾವು ಮನೆಯಿಂದ ಹೊರಗಡೆ ಹೋಗುವಾಗ ಬಳಸುವ ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಒಬ್ಬ ವ್ಯಕ್ತಿಯು ಹರಿದ ಜೀನ್ಸ್ ಅಥವಾ ಹಳೆಯ ಹರಿದ ಬಟ್ಟೆ ಗಳನ್ನು ಧರಿಸುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ಅನೇಕ ರೀತಿಯ ರೋಗಗಳು ಸಿಕ್ಕಿ ನಿಮ್ಮ ದೇಹ ದುರ್ಬಲವಾಗುತ್ತದೆ. ಇದರಿಂದ ಗ್ರಹಗತಿಗಳು ಕೂಡ ಕೆಟ್ಟ ಪರಿಣಾಮ ಬೀರುತ್ತವೆ. ನೀವೂ ಹರಿದ ಜೀನ್ಸ್ ಧರಿಸಿದರೆ ಅದಕ್ಕೆ ಸಂಬಂಧಿಸಿದ ಈ ವಿಷಯಗಳನ್ನು
ಖಂಡಿತಾ ತಿಳಿದುಕೊಳ್ಳಿ.
ಶುಕ್ರನನ್ನು ಜೀವನದ ಗುಣಮಟ್ಟ ಮತ್ತು ಆನಂದದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹರಿದ ಬಟ್ಟೆ ಧರಿಸಿದರೆ, ಶುಕ್ರ ದೇವನು ಕೋಪಗೊಳ್ಳುತ್ತಾನೆ. ಹರಿದ ಬಟ್ಟೆಗಳನ್ನು ಧರಿಸುವುದು ನಿಮಗೆ ನಕಾರಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಈ ಪರಿಣಾಮಗಳು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇದಲ್ಲದೆ ಹಳೆಯ ಬಟ್ಟೆಗಳನ್ನು ಧರಿಸುವುದರಿಂದ, ವ್ಯಕ್ತಿಯು ಕ್ರಮೇಣ ಬಡವ ನಾಗುತ್ತಾನೆ ಮತ್ತು ಅವನ ಅದೃಷ್ಟದ ಬೀಗವು ಮುಚ್ಚಲು ಪ್ರಾರಂಭಿಸುತ್ತದೆ.
ಮನೆಯಲ್ಲಿ ಬಡವನ ಉಂಟಾಗುತ್ತದೆ
ಶಾಸ್ತ್ರ ಗಳ ಪ್ರಕಾರ ಹರಿದ ಬಟ್ಟೆಗಳನ್ನು ಧರಿಸುವುದರಿಂದ, ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾಳೆ ಮತ್ತು ಇದರಿಂದ ಮನೆಯಲ್ಲಿ ಬಡತನ ಬರಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಯಾವಾಗಲೂ ಹರಿದ ಅಥವಾ ಹಳೆಯ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಹರಿದ ಜೀನ್ಸ್ ಧರಿಸುವುದು ವ್ಯಕ್ತಿಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೂ ಕೆಲವು ಸಂಬಂಧಗಳು ದೂರವಾಗಲು ಪ್ರಾರಂಭವಾಗುತ್ತದೆ.
ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ಇರಲಿ..!
ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ರಾತ್ರಿಯಲ್ಲಿ ನಿಮ್ಮ ಬಟ್ಟೆಗಳನ್ನು ಹೊರಗೆ ಬಿಡಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಬಟ್ಟೆಯೊಳಗೆ ನೆಗೆಟಿವ್ ಎನರ್ಜಿ ಸೇರುತ್ತದೆ ಮತ್ತು ಆ ಬಟ್ಟೆ ಧರಿಸಿದವರ ಮೇಲೂ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿಯಲ್ಲಿ ನಿಮ್ಮ ಬಟ್ಟೆಗಳನ್ನು ಹೊರಗೆ ಬಿಡಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಬಟ್ಟೆಯೊಳಗೆ ನೆಗೆಟಿವ್ ಎನರ್ಜಿ ಸೇರುತ್ತದೆ ಮತ್ತು ಆ ಬಟ್ಟೆ ಧರಿಸಿದವರ ಮೇಲೂ ಪರಿಣಾಮ ಬೀರುತ್ತದೆ.
ಶಾಸ್ತ್ರಗಳ ಪ್ರಕಾರ, ಹೊಸ ಬಟ್ಟೆಗಳನ್ನು ಯಾವಾಗಲೂ ಶುಕ್ರವಾರ, ಗುರುವಾರ ಅಥವಾ ಬುಧವಾರದಂದು ಧರಿಸಬೇಕು.
ಯಾವುದೇ ಹೊಸ ಬಟ್ಟೆಗಳನ್ನು ಧರಿಸಲು ಶುಕ್ರವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ.
ಶನಿವಾರ ದಂದು ಹೊಸ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.ಯಾವುದೇ ಹೊಸ ಬಟ್ಟೆಗಳನ್ನು ಧರಿಸಲು ಶುಕ್ರವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ.