ಹಾಸನ:- ಹಾಸನದಲ್ಲಿ ಕಾಡಾನೆ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಜರುಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದೆಹಲಿ ಭೇಟಿ ಬಳಿಕ ಗೃಹ ಖಾತೆ ತೊರೆಯಲು ನಿರ್ಧರಿಸಿದ್ರಾ ಪರಮೇಶ್ವರ್? ಏನಿದರ ಅಸಲಿ ಮರ್ಮ?
ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಘಟನೆ ಜರುಗಿದೆ. 28 ವರ್ಷದ ಅನಿಲ್ ಮೃತ ಯುವಕ.
ಮೃತ ಅನಿಲ್ ಕೆಲಸ ಮುಗಿಸಿ ಅಣ್ಣಾಮಲೈ ಎಸ್ಟೇಟ್ನಿಂದ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಎತ್ತಿ ಬಿಸಾಕಿ ತುಳಿದು ಸಾಯಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.