ಹೈದರಾಬಾದ್: ಪ್ರೀತಿಗೆ ಕಣ್ಣಿಲ್ಲ… ಪ್ರೀತಿ ಕುರುಡು ಅಂತಾರೆ. ಅಂತೆಯೇ ಇಲ್ಲೊಂದು ಇಂಥದ್ದೇ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಪ್ರೀತಿ ಮಾಡಿ ಮದುವೆಯಾದ ಹೃದಯಸ್ಪರ್ಶಿ ಪ್ರಕರಣವೊಂದು ನಡೆದಿರುವ ಬಗ್ಗೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ. ಹೌದು. ತೆಲಂಗಾಣ ಮೂಲದ ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ ಮದುವೆಯಾಗಿ (Love Marriage) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಯುವಕನನ್ನು ಗಣೇಶ್ ಎಂದು ಗುರುತಿಸಲಾಗಿದ್ದು, ತೆಲಂಗಾಣದ ಖಮ್ಮಮ್ ನಿವಾಸಿ. ಈತ ಆಂಧ್ರಪ್ರದೇಶದ ನಂದಿಗಮ ಮೂಲದ ದೀಪು ಎಂಬಾಕೆಯನ್ನು ಮದುವೆಯಾಗಿದ್ದಾನೆ. ಹೈದರಾಬಾದ್ನಲ್ಲಿ ಇಬ್ಬರ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಅಂತೆಯೇ ಕಳೆದ ಒಂದು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು,
ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ಇವರಿಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದೇವೆ. ಹೀಗಾಗಿ ಸದ್ಯ ಮನಗೆ ಜೀವ ಭಯವಿದೆ. ನಮಗೆ ರಕ್ಷಣೆ ಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.