ಬೆಂಗಳೂರು: ಪ್ರೇಮ ವೈಫಲ್ಯದಿಂದ ಕಟ್ಟಡದಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋನಪ್ಪನ ಅಗ್ರಹಾರದ ಲಕ್ಷ್ಮಿ ವೆಂಕಟೇಶ ಜೆನ್ಸ್ ಪಿಜಿ ಕಟ್ಟಡದಲ್ಲಿ ನಡೆದಿದೆ.
ಹೌದು .. ಕೋನಪ್ಪನ ಅಗ್ರಹಾರದ ಲಕ್ಷ್ಮಿ ವೆಂಕಟೇಶ ಜೆನ್ಸ್ ಪಿಜಿ ಕಟ್ಟಡದ ನಾಲ್ಕನೆ ಮಹಡಿಯಿಂದ ಹಾರಿ ವಿಷ್ಣು (28) ಆತ್ಮಹತ್ಯೆ ಮಾಡಿಕೊಂಡಿರೋ ಯುವಕನಾಗಿರುತ್ತಾನೆ.
ತಮಿಳುನಾಡು ಮೂಲದ ಯುವಕ ವಿಷ್ಣು ಕೋನಪ್ಪನ ಅಗ್ರಹಾರದ ಲಕ್ಷ್ಮಿ ವೆಂಕಟೇಶ ಜೆನ್ಸ್ ಪಿಜಿಯಲ್ಲಿ ವಾಸವಾಗಿದ್ದನು.
ಮೃತದೇಹ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಕೋನಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.