ಉಪ್ಪು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದ್ದು, ಅದೇ ರೀತಿಯಾಗಿ ಇದರಲ್ಲಿ ಸೌಂದರ್ಯ ವರ್ಧಿಸುವಂತಹ ಕೆಲವು ಗುಣಗಳು ಕೂಡ ಇವೆ. ಉಪ್ಪು ನೀರಿನಿಂದ ಯಾವೆಲ್ಲಾ ಅರೋಗ್ಯ ಹಾಗೂ ಸೌಂದರ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ನೀವು ತಿಳಿಯಲು ತಯಾರಾಗಿ.
ಗಂಟಲು ನೋವಿನ ಸಮಸ್ಯೆ (throat pain)
ಉಪ್ಪು ನೀರಿನಿಂದ ಗೋರ್ಗಲ್ ಮಾಡುವುದು ಗಂಟಲಿನಲ್ಲಿ ಇರುವ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಗಂಟಲು ನೋವಿನ ಸಮಸ್ಯೆ ಪರಿಹಾರವಾಗುತ್ತದೆ. ಇದು ಗಂಟಲು ಕೋಶಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಗಂಟಲು ಸೋಂಕು ಅಥವಾ ಗಂಟಲು ನೋವಿನ ಸಮಯದಲ್ಲಿ ಉಪ್ಪು ನೀರನ್ನು ಬಳಸುವುದರಿಂದ ನಿಮಗೆ ಪರಿಹಾರ ನೀಡಬಹುದು. ಏಕೆಂದರೆ ಸಮುದ್ರದ ಉಪ್ಪು ಉರಿಯೂತದ ಗುಣಗಳನ್ನು ಹೊಂದಿದೆ. ಇದರಿಂದಾಗಿ ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಗೋರ್ಗಲ್ ಮಾಡಿದಾಗ ಗಂಟಲಿನ ಸೋಂಕಿತ ಜೀವಕೋಶಗಳ ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಚರ್ಮಕ್ಕಾಗಿ
ಚರ್ಮದ ಸಮಸ್ಯೆಗಳನ್ನು (skin problem) ನಿವಾರಿಸಲು ಉಪ್ಪು ಸಹ ಪರಿಣಾಮಕಾರಿ ಮಾರ್ಗವಾಗಿದೆ. ಇದರಲ್ಲಿ ಇರುವ ಸಲ್ಫರ್ ಘಟಕಗಳು ಚರ್ಮದ ಮೇಲ್ಮೈಯನ್ನು ಸ್ವಚ್ಛವಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಉಪ್ಪು ಹಾಕಿದ ನೀರನ್ನು ಉಪಯೋಗಿಸಿ.
ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ
ಹೊಟ್ಟೆಯ ಸಮಸ್ಯೆಗಳನ್ನು (stomach problem) ನಿವಾರಿಸಲು ಇದು ಪರಿಣಾಮಕಾರಿ ಮಾರ್ಗವೂ ಆಗಿದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.ಉತ್ತಮ ಜೀರ್ಣಕ್ರಿಯೆಗೆ ಉಪ್ಪು ನೀರು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ.
ಬಾಯಿಯ ವಾಸನೆಯನ್ನು ತೆಗೆದುಹಾಕಲು
ಉಪ್ಪು ನೀರನ್ನು ಮೌತ್ ವಾಶ್ (mouth wash)ಆಗಿಯೂ ಬಳಸಬಹುದು. ನಿಯಮಿತ ಬಳಕೆಯಿಂದ ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಇದು ಒಸಡುಗಳ ಉರಿಯೂತ, ದುರ್ವಾಸನೆಯನ್ನು ತೆಗೆದುಹಾಕುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 1 ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ಸುಮಾರು 1-2 ನಿಮಿಷಗಳ ಕಾಲ ಬಾಯಿಯಲ್ಲಿ ಇರಿಸಿ. ಇದರಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯವಾಗುತ್ತದೆ. ಇದರಿಂದ ಬಾಯಿ ಕ್ಲೀನ್ ಆಗುತ್ತದೆ, ಇದನ್ನ ನೀವು ಖಂಡಿತಾ ಟ್ರೈ ಮಾಡಬಹುದು.
ಪಾದಗಳಿಗೆ
ಪಾದಗಳಿಂದ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಆ ಸಮಸ್ಯೆ ನಿವಾರಿಸಲು ಉಪ್ಪು ನೀರನ್ನು ಸಹ ಬಳಸಬಹುದು. ಇದರಿಂದ ಪಾದದ ವಾಸನೆ ನಿವಾರಣೆ ನಾಡುತ್ತದೆ. ಪಾದದಲ್ಲಿರುವ ಬ್ಯಾಕ್ಟೀರಿಯಾ ಸಮಸ್ಯೆ ನಿವಾರಣೆಯಾಗುತ್ತದೆ, ಇದನ್ನು ವಾರದಲ್ಲಿ ಒಂದು ಬಾರಿಯಾದರೂ ಟ್ರೈ ಮಾಡಬೇಕು. ಇದಕ್ಕಾಗಿ ಒಂದು ದೊಡ್ಡ ಬಟ್ಟಲಿನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ 1-2 ಕಪ್ ಉಪ್ಪನ್ನು ಸೇರಿಸಿ. ಈಗ ಸ್ವಲ್ಪ ಸಮಯ ಈ ನೀರಿನಲ್ಲಿ ಪಾದಗಳನ್ನು ಅದ್ದಿ. 20 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ನಿಮ್ಮ ಪಾದಗಳನ್ನು ತೊಳೆಯಿರಿ.