ಕೋಲಾರ: ರೈತರ ವಿರುದ್ಧ ಅಪಾಯಕಾರಿ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ರೈತ ಕಾಯ್ದೆಯನ್ನ ರದ್ದುಪಡಿಸದೆ, ಹಿಂದಿನ ಸರ್ಕಾರ ತಂದ ಕಾಯ್ದೆಗಳನ್ನ ಜಾರಿ ಮಾಡುತ್ತಿದೆ. ಯಾವ ಕಾರ್ಪೋರೇಟ್ ಕಂಪನಿ ನಿಮ್ಮೊಂದಿಗೆ ಇದ್ದಾರೆ? ಇಂತಹ ಅಪಾಯದ ಕೆಲಸಕ್ಕೆ ಕೈ ಹಾಕಬೇಡಿ. ಕಾಯ್ದೆ ರದ್ದಿಪಡಿಸಬೇಕೆಂದು ಚಳುವಳಿ ಮಾಡಿದಾಗ,
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಕಾಯ್ದೆ ರೈತರಿಗೆ ವಿರುದ್ದ ಇದೆ ಎಂದು ಹೇಳಿದ್ರಿ. ಆಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಚಳುವಳಿಯಲ್ಲಿ ಭಾಗವಹಿಸಿದ್ರು. ಜಾಹಿರಾತು ನೀಡುವ ಮೂಲಕ ರೈತರನ್ನ ಹರಾಜಿಗೆ ಇಟ್ಟಿದ್ದೀರಿ ಎಂದು ಕೋಲಾರದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.