ದೆಹಲಿ:- ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ವಯಸ್ಸಾದವರಿಗೆ ಹಾಗೂ ಅಂಗವಿಕಲರಿಗೆ ಹಾಗೂ ಮತಗಟ್ಟೆಗೆ ಹೋಗಿ ಮತದಾನ ಮಾಡಲು ಸಾಧ್ಯವಿಲ್ಲದವರಿಗೆ EC ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದೆ.
ಆದರೆ, ಈ ಪ್ರಕ್ರಿಯೆಗೆ ಉಳಿದಿರುವುದು ಇಂದು ಮಾತ್ರ. ಇಂದೇ ನೋಂದಣಿ ಮಾಡಿಕೊಂಡರೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಮತ ಹಾಕಲು ಸಾಧ್ಯ.
ಮತದಾರರ ಸಹಾಯವಾಣಿ ಆಪ್ ಡೌನ್ಲೋಡ್ ಮಾಡಿ. ಫಾರ್ಮ್ 6ನಲ್ಲಿ 2ನೇ ಆಯ್ಕೆ ಆರಿಸಿ. ಅಗತ್ಯ ಮಾಹಿತಿ ತುಂಬಿಸಿ ನೋಂದಣಿ ಮಾಡಿ.
ಲೋಕಸಭಾ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಮತದಾನದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ EC ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದೆ.