ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಈ ಆರೋಗ್ಯ ಇಲ್ಲದಿದ್ದರೆ ಮನುಷ್ಯನ ಬಳಿ ಎಷ್ಟೇ ಆಸ್ತಿ, ಅಂತಸ್ತಿದ್ದರೂ ಕೂಡ ಅದು ಶೂನ್ಯವಾಗುತ್ತೆ. ಆದರೆ ಇತ್ತೀಚಿನ ದಿನಮಾನದಲ್ಲಿ ಶೇಖಡಾ 100 ಕ್ಕೆ 80 ರಷ್ಟು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಾರಣ ಬದಲಾದ ಜೀವನ ಶೈಲಿ. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಆಗಿರಬಹುದು, ಕೆಲಸದ ಒತ್ತಡವಾಗಿರಬಹುದು ಹಾಗೂ ಇನ್ನಿತರ ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಾ ಬರ್ತಿದೆ. ಅದರಲ್ಲಿ ಮೊದಲಿಗೆ ಹೇಳೋದಾದ್ರೆ, ಸಾಮಾನ್ಯವಾಗಿ ಇತ್ತೀಚಿನ ಪೀಳಿಗೆಯ ಜನರಲ್ಲಿ ಮಧುಮೇಹದ ರೋಗ ಹೆಚ್ಚಾಗಿ ಕಂಡು ಬರ್ತಿದೆ. ಹಾಗಿದ್ರೆ ಇದನ್ನು ನಿಯಂತ್ರಿಸಲು ಏನ್ ಮಾಡ್ಬೇಕು!?, ಯಾವ ರೀತಿ ಆಹಾರ ಸೇವಿಸಿದ್ರೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ…
Nikhil Kumaraswamy: ಜೆಡಿಎಸ್ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ: ನಿಖಿಲ್ ಕುಮಾರಸ್ವಾಮಿ
ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಸಾಮಾನ್ಯವಾಗಿದೆ. ಮಧುಮೇಹದ ಸಂದರ್ಭದಲ್ಲಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇನ್ನೂ ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ ಅನ್ನವನ್ನು ಹೇಗೆ ತಯಾರಿಸಬೇಕು, ಎಷ್ಟು ಹೊತ್ತು ಬೇಯಿಸಬೇಕು? ಕುಕ್ಕರ್ ನಲ್ಲಿ ಬೇಯಿಸಬೇಕೇ? ಬೇಯಿಸಬಾರದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಧುಮೇಹಿ ರೋಗಿಗಳಿಗೆ ಕುಕ್ಕರ್ ನಲ್ಲಿ ಅನ್ನವನ್ನು ಬೇಯಿಸಬಾರದು.
ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ. ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯನ್ನು ನೀರಿನಲ್ಲಿ 15-20 ನಿಮಿಷ ನೆನೆಯಲು ಇಡಬೇಕು. ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ಇಡಬೇಕು. ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8 ರಷ್ಟು ಹೆಚ್ಚು ಇರಬೇಕು.
ನೀರು ಚೆನ್ನಾಗಿ ಕಾಯ್ದು ಕುದಿಯಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರನೆಲ್ಲಾ ಬಸಿದು, ಕುದಿಯುತ್ತಿರುವ ನೀರಿನಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಖಾಯಿಲೆಯಿಂದ ದೂರವಿರಲು ಈ ʼಆಹಾರʼ ಸೇವಿಸಿ ಬೇಯುವಾಗ ಪಾತ್ರೆಯ ಬಾಯನ್ನು ಮುಚ್ಚಬೇಕು ಬಳಿಕ ಅಕ್ಕಿ ತಳಕಟ್ಟದ ಹಾಗೆ ಆಗಾಗ ಸೌಟಿನಿಂದ ತಿರುವುತ್ತಿರಬೇಕು. ಅಕ್ಕಿ ಹದವಾಗಿ ಬೆಂದು ಮೆತ್ತಗಾದಾಗ ಅದರಲ್ಲಿರುವ ಗಂಜಿಯನ್ನು ಬಸಿದು ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಬೇಕು. ಇದರಿಂದ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ, ಹುಡಿ ಹುಡಿಯಾಗಿ ಸಿದ್ಧವಾಗುತ್ತದೆ. ಈ ಅನ್ನವನ್ನು ಮಧುಮೇಹಿ ರೋಗಿಗಳು ತಮ್ಮ ಪ್ರಮುಖ ಆಹಾರವನ್ನಾಗಿ ಊಟ ಮಾಡಬಹುದು. ಈ ರೀತಿ ಪಾರಂಪರಿಕ ವಿಧಾನದಿಂದ ನಮ್ಮ ದೇಹದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ತರಬಹುದಾಗಿದೆ.
ಒಬ್ಬ ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯ ಎನ್ನೋದು ತಿಳಿದಿರೋ ವಿಚಾರ. ಆದ್ರೆ ನಮ್ಮ ಸುತ್ತಮುತ್ತಲಿನ ಪರಿಸರದಿಂದ ಸಿಗುವ ಆರೋಗ್ಯದ ಬೆನಿಫಿಟ್ ಅಷ್ಟೂ ತಿಳಿದಿರ್ಲಿಕ್ಕಿಲ್ಲ. ಇದೀಗ ಪ್ರಕೃತಿಯಲ್ಲಿ ಸಿಗುವ ಒಂದು ಗಿಡದ ಮಹತ್ವದ ಬಗ್ಗೆ ತಿಳಿಯೋಣ! ಹಾಗಿದ್ರೆ ಯಾವುದು ಆ ಗಿಡ!?, ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ..
ನಮ್ಮ ಪ್ರಕೃತಿಯಲ್ಲಿ ಸಿಗುವ ಕೆಲವು ಸಸ್ಯಗಳು, ಎಲೆಗಳು, ಹೂವುಗಳು, ಬೀಜಗಳು ಮತ್ತು ಹಣ್ಣುಗಳನ್ನುಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಂತಹ ಔಷಧೀಯ ಸಸ್ಯಗಳಲ್ಲಿ ಉಮ್ಮತ್ತಿ ಗಿಡವೂ ಒಂದು.
ಉಮ್ಮತ್ತಿ ಎಲೆಗಳು ಅತ್ಯುತ್ತಮವಾದ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಕಾಲು ನೋವು, ಕೀಲು ನೋವು ಮುಂತಾದ ಯಾವುದೇ ಪ್ರದೇಶದಲ್ಲಿ ನೋವು ಇದ್ದರೆ ಈ ಎಲೆಗಳು ಅತ್ಯುತ್ತಮ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಉಮ್ಮತ್ತಿ ಎಲೆಯನ್ನ ತೆಗೆದುಕೊಂಡು ಅದಕ್ಕೆ ಎಳ್ಳೆಣ್ಣೆಯನ್ನ ಹಚ್ಚಿ ಸ್ವಲ್ಪ ಬಿಸಿ ಮಾಡಿ. ನೋವು ಇರುವ ಸ್ಥಳದಲ್ಲಿಟ್ಟು ಕಟ್ಟಿದರೆ ಎಲ್ಲಾ ನೋವುಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಈ ಸಲಹೆಯು ತಲೆನೋವು ಮತ್ತು ಮೈಗ್ರೇನ್ ತಲೆನೋವಿಗೆ ಅದ್ಭುತಗಳನ್ನ ಮಾಡುತ್ತದೆ. ತಕ್ಷಣದ ಪರಿಹಾರವನ್ನ ಒದಗಿಸುತ್ತದೆ. ಅಷ್ಟೇ ಅಲ್ಲ, ಅಧಿಕ ತೂಕದಿಂದ ಬಳಲುತ್ತಿರುವವರಿಗೂ ಉಮ್ಮತ್ತಿ ಉಪಯುಕ್ತವಾಗಿದೆ. ದೇಹದಲ್ಲಿ ಕೊಬ್ಬು ಸಂಗ್ರಹವಾಗುವ ಈ ಸಲಹೆಯನ್ನ ನೀವು ಪ್ರಯತ್ನಿಸಿದರೆ, ದೇಹದಲ್ಲಿನ ಕೊಬ್ಬು ಮೇಣದಬತ್ತಿಯಂತೆ ಕರಗುತ್ತದೆ.
ಉಮ್ಮತ್ತಿ ಎಲೆ ಹೆಚ್ಚುವರಿ ತೂಕವನ್ನ ಕಡಿಮೆ ಮಾಡುತ್ತದೆ. ಮಹಿಳೆಯರಲ್ಲಿ ಬಿಸಿ ಕುದಿಯುವಿಕೆ, ಗಂಟಲು ನೋವು ಮತ್ತು ಸ್ತನಗಳ ಊತದಂತಹ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಲೆಗಳನ್ನ ಎಳ್ಳೆಣ್ಣೆಯೊಂದಿಗೆ ಬಿಸಿ ಮಾಡಿ ಕಟ್ಟಿದರೆ, ಅವ್ರು ಬೇಗನೆ ಆ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾರೆ.
ಸಾಮಾನ್ಯವಾಗಿ ಮಂಗ ಮತ್ತು ಹುಚ್ಚು ನಾಯಿ ಕಡಿತಕ್ಕೂ ಉಮ್ಮತ್ತಿ ಎಲೆಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಉಮ್ಮತ್ತಿ ಎಲೆಗಳನ್ನ ಪೇಸ್ಟ್ ಮಾಡಿ ಆ ಮಿಶ್ರಣವನ್ನ ಮಂಗ ಅಥವಾ ಹುಚ್ಚು ನಾಯಿ ಕಚ್ಚಿದ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಅವುಗಳ ವಿಷ ದೇಹಕ್ಕೆ ಹೋಗುವುದಿಲ್ಲ ಎನ್ನುತ್ತಾರೆ ತಜ್ಞರು.
ಉಮ್ಮತ್ತಿ ಎಲೆಗಳ ರಸವನ್ನ ತುರಿಕೆ ಮತ್ತು ಹುಣ್ಣುಗಳ ಮೇಲೆ ಹಚ್ಚುವುದರಿಂದ ಬೇಗನೆ ಕಡಿಮೆಯಾಗುತ್ತದೆ. ತಲೆಯಲ್ಲಿ ಹೇನು, ಹುಣ್ಣು ಇರುವವರು ಈ ಎಲೆಗಳ ರಸವನ್ನ ಆಲದ ಎಣ್ಣೆಗೆ ಬೆರೆಸಿ ಸೇವಿಸಿ ಹಚ್ಚಿದರೆ ಹೇನು ಮಾಯವಾಗುತ್ತೆ, ಹುಣ್ಣು ವಾಸಿಯಾಗುತ್ತೆ. ಅಡಿಭಾಗ ಉರಿ ಮತ್ತು ಸೆಳೆತವಿದ್ದರೆ ಈ ಎಲೆಗಳ ರಸವನ್ನು ಹಚ್ಚುವುದರಿಂದ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ಈ ಮರದ ಎಲೆಗಳ ರಸವನ್ನು ತಲೆಗೆ ಹಚ್ಚಿದರೆ ಹೇನು ಮಾಯವಾಗಿ ಕೂದಲು ದಟ್ಟವಾಗಿ ಬೆಳೆಯುತ್ತದೆ. ಇಷ್ಟೆಲ್ಲಾ ಪ್ರಯೋಜನ್ನು ಉಮ್ಮತಿ ಗಿಡ ಹೊಂದಿದೆ.
ನೋಡಿದ್ರಲ್ಲ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮವಾದ ಹಲವಾರು ಔಷಧೀಯ ಸಸ್ಯಗಳಿವೆ. ಆದರೆ ಅದರ ಅರಿವು ನಮಗಿರೋದಿಲ್ಲ ಅಷ್ಟೆ.