ದೊಡ್ಮನೆ ಆಟಕ್ಕೆ ಬ್ರೇಕ್ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ ಬಾಸ್ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಬಿರುಕು ಮೂಡಿದೆ. ಹೌದು 105 ದಿನದಿಂದ ಇರದಿರುವ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ.
ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಭವ್ಯಗೌಡ, ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ. ಈ ವೇಳೆ ತ್ರಿವಿಕ್ರಮ್, ನೀನೇನೂ ನನಗೆ ಹೇಳುವುದು?, ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ. ಫಸ್ಟ್ ಡೇ ಇದ್ದಾಗೆ ಈಗ ನೀನಿಲ್ಲ ಎಂದು ಭವ್ಯಗೆ ನೇರವಾಗಿಯೇ ಹೇಳಿದ್ದಾರೆ.
ಅತಿಯಾಗಿ ಹಾಲು ಕುಡಿಯುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತವೆಯೇ..? ಈ ಸ್ಟೋರಿ ನೋಡಿ
ತ್ರಿವಿಕ್ರಮ್ ಹಾಗೂ ಭವ್ಯ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯ ಎದ್ದು ಹೋಗಿದ್ದಾರೆ. ಸದ್ಯ ಇಬ್ಬರ ನಡುವಿನ ಸ್ನೇಹ, ಪ್ರೀತಿ ಈಗ ಇಲ್ಲ ಎಂದು ಅನಿಸುತ್ತಿದೆ. ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೀಗೆ ಒಬ್ಬರನೊಬ್ಬರು ದೂರ ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಇದರಿಂದ ಭವ್ಯಾ ಹಾಗೂ ತ್ರಿವಿಕ್ರಂ ದೂರವಾಗುವ ಸೂಚನೆ ಸಿಕ್ಕಿದೆ.