ಬೆಂಗಳೂರು:- ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ತಮ್ಮ ನೇಮಕವನ್ನು ಟೀಕಿಸಿರುವ ಕುಮಾರಸ್ವಾಮಿಗೆ ಬಸವರಾಜ್ ರಾಯರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಕುಮಾರಸ್ವಾಮಿ ಅವರಿಗೆ ಯಾಕೆ ಬೇಕು. ನನ್ನ ಜತೆಗೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಗೊತ್ತಿದೆಯೋ? ಅವರಿಗೆ ಗೊತ್ತಿದೆಯೋ? ಸಾಬೀತಾಗಲಿ’ ಎಂದರು.
ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನು ಗೊತ್ತಿದೆಯೋ ಮಾತನಾಡುತ್ತೇನೆ, ಅವರಿಗೆ ಏನು ಗೊತ್ತಿದೆಯೋ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವ ಇವರು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದರು.
ಸಲಹೆಗಾರ ಸ್ಥಾನ ಕೊಡಿ ಎಂದು ನಾನು ಕೇಳಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್ಥಿಕ ಸಲಹೆಗಾರ ಸ್ಥಾನ ಕೊಟ್ಟಿದ್ದಾರೆ. ಬಹಳ ದೊಡ್ಡ ಸವಾಲಿನ ಜವಾಬ್ದಾರಿ ಇದೆ. ಇದು. ಸುಮ್ಮನೆ ಕಾರು, ಬೇರೆ ಸೌಲಭ್ಯಕ್ಕಾಗಿ ತಗೊಂಡಿಲ್ಲ. ನನ್ನದೇ ಆದ ಆಲೋಚನೆಗಳಿವೆ. ಮುಖ್ಯಮಂತ್ರಿಗಳೂ ತಜ್ಞರಿದ್ದು ಅವರೊಂದಿಗೆ ಕೂಡಿ ಕೆಲಸ ಮಾಡುತ್ತೇನೆ ಎಂದರು.