ಬೆಂಗಳೂರು:– ಇಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೂ ಕೂಡ ಯೋಗ ದಿನವನ್ನು ಯುವಕರು, ವಿದ್ಯಾರ್ಥಿಗಳು, ರಾಜಕೀಯ ಗಣ್ಯರು, ಸಿನಿಮಾ ಸೆಲೆಬ್ರಿಟಿಗಳು ಯೋಗ ಪ್ರದರ್ಶಿಸುವ ಮೂಲಕ ಆಚರಣೆ ಮಾಡಿದ್ದಾರೆ.
ಅದರಂತೆ ರಾಜಧಾನಿ ಬೆಂಗಳೂರಿನ ಸಂಜಯ್ ನಗರದ Daffodils English School ನಲ್ಲಿಯೂ ಯೋಗ ದಿನಾಚರಣೆ ಆಚರಿಸಲಾಗಿದ್ದು, ಶಾಲೆಯ ಪ್ರಿನ್ಸಿಪಾಲ್ Dr . Sujatha Girish ಅವರ ಸಮ್ಮುಖದಲ್ಲಿ ಶಿಕ್ಷಕರು, ಹಾಗೂ ಮಕ್ಕಳು ಯೋಗಾಸನ ಮಾಡುವ ಮೂಲಕ ವಿಶ್ವಯೋಗ ದಿನವನ್ನು ಆಚರಿಸಿದ್ದಾರೆ. ಇದೇ ವೇಳೆ ಪ್ರಿನ್ಸಿಪಲ್ ಸುಜಾತ ಗಿರೀಶ್ ಅವರು ಕೂಡ ಮಕ್ಕಳೊಟ್ಟಿಗೆ ಯೋಗ ಮಾಡಿ ಗಮನ ಸೆಳೆದರು.
DFL ಯೋಗ ತರಬೇತುದಾರರಾದ MS Jayarathna and Bijaya ಅವರು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರಾಣಾಯಾಮ ಮತ್ತು ಯೋಗವನ್ನು ಹೇಳಿಕೊಟ್ಟಿದ್ದಾರೆ.
ವಿದ್ಯಾರ್ಥಿಗಳ ಗುಂಪು ಯೋಗ ಪ್ರದರ್ಶನದೊಂದಿಗೆ ತಮ್ಮ ಪ್ರತಿಭೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದರು, ಸಮತೋಲನ, ಶಕ್ತಿ ಮತ್ತು ನೆಮ್ಮದಿಯ ನಿಜವಾದ ಸಾರವನ್ನು ಪ್ರದರ್ಶಿಸಿದರು.
ಪೋಷಕರನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಯಿತು. ಅದರಂತೆ ಅವರು ಕೂಡ ಉತ್ಸಾಹದಿಂದ ಭಾಗವಹಿಸಿದರು.