ದಾವಣಗೆರೆ: ಯತ್ನಾಳ್ ಗೋಮುಖ ವ್ಯಾಘ್ರ ಅಂತ ಯಡಿಯೂರಪ್ಪನವರಿಗೆ ಗೊತ್ತಾಗಲಿಲ್ಲ ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೆ ಹೀಗೆಯೇ ಮಾತನಾಡಿ ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಆಗಿದ್ದರು. ಆದ್ರೆ ಯಡಿಯೂರಪ್ಪನವರು ಹೋಗಲಿ ಅಂತ ಕರೆತಂದ್ರು.
ಈ ಮನುಷ್ಯ ಕಾಲಿಡಿದು ಒಳಗೆ ಬಂದರು. ಯತ್ನಾಳ್ ಗೋಮುಖ ವ್ಯಾಘ್ರ ಅಂತ ಯಡಿಯೂರಪ್ಪನವರಿಗೆ ಗೊತ್ತಾಗಲಿಲ್ಲ. ಯಡಿಯೂರಪ್ಪ ಬೆಳ್ಳಗಿರುವುದೆಲ್ಲ ಹಾಲು ಅಂತ ನಂಬುತ್ತಾರೆ. ಅಷ್ಟು ಪರಿಶುದ್ಧವಾದ ರಾಜಕಾರಣಿ ಯಡಿಯೂರಪ್ಪನವರು. ಅಂತವರಿಗೆ ದ್ರೋಹ ಮಾಡುತ್ತಿದ್ದಿಯ ಎಂದು ಕಿಡಿಕಾರಿದರು.
ಮಂಗಳವಾರ ಈ ಕೆಲಸಗಳನ್ನು ಮಾಡಿದ್ರೆ ನಿಮಗೆ ಬೇಡವೆಂದರೂ ಸಂಪತ್ತು ಹುಡುಕಿ ಬರುತ್ತೆ.!
ಬಸನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಬಿಎಸ್ವೈ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಜಾರಕಿಹೊಳಿಗೆ ವಿಜಯೇಂದ್ರ ಧಮ್ಕಿ ಹಾಕಿಲ್ಲ, ಶಾಸಕ ರಮೇಶ್ ಜಾರಕಿಹೊಳಿ ಮಾತಿನಿಂದ ಬಿಎಸ್ವೈಗೆ ನೋವಾಗಿದ್ದನ್ನು ಅವರ ಅಭಿಮಾನಿಗಳು ಸಹಿಸಲ್ಲ ಎಂದಿದ್ದಾರೆ. ವಿಜಯೇಂದ್ರ ಜಾರಕಿಹೊಳಿಯನ್ನ ನೋಡಿಕೊಳ್ತಿನಿ ಅಂತಾ ಹೇಳಿಲ್ಲ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.