ಶಿವಮೊಗ್ಗ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಪುತ್ರ ಕೆಈ ಕಾಂತೇಶ್ಗೆ ಹಾವೇರಿ ಟಿಕೆಟ್ ಕೈತಪ್ಪಿದ ನಂತರ ದಿನಂಪ್ರತಿ ಬಿಎಸ್ವೈ ಮತ್ತು ಮಕ್ಕಳ ವಿರುದ್ಧ ಗುಡುಗುತ್ತಿದ್ದಾರೆ. ಇದೀಗ ವಿಜಯೇಂದ್ರ ಕ್ಷೇತ್ರ ಶಿಕಾರಿಪುರದಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವರು ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ.
Holi Colours: ಹೋಳಿ ಹಬ್ಬಕ್ಕೆ ಈ ರೀತಿ ಬಣ್ಣ ಬಳಸೋದ್ರಿಂದ ಕ್ಯಾನ್ಸರ್, ಕಣ್ಣಿನ ಸಮಸ್ಯೆ ಗ್ಯಾರಂಟಿ..!
ಯುವಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಯಡಿಯೂರಪ್ಪ ಅವರೇ ನನಗೆ ಏಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರನ್ನು ಕುರಿಗಳ ರೀತಿ ಅಂದುಕೊಂಡಿದ್ದಾರೆ. ಅಪ್ಪ-ಮಕ್ಕಳು ಬೇಡವೆಂದು ಶಿಕಾರಿಪುರದ ಜನ ತೀರ್ಮಾನಿಸಿದ್ದಾರೆ. ರಾಘವೇಂದ್ರ ಸೋಲಿಸುವ ಮೂಲಕ ಅವರಿಗೆ ಬುದ್ಧಿ ಕಲಿಸಬೇಕು. ಸೋಲಿನ ರುಚಿ ಏನು ಅಂತಾ ಯಡಿಯೂರಪ್ಪಗೆ ತೋರಿಸಬೇಕು ಎಂದರು.