ಕಾರವಾರ:- ಮಾಜಿ ಸಚಿವ ಈಶ್ವರಪ್ಪ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈಶ್ವರಪ್ಪನವರ ದೆಹಲಿ ಎಪಿಸೋಡ್ ಬಗ್ಗೆ ಮಾತಾಡಿದರು. ಅಮಿತ್ ಶಾ ಯಾಕೆ ಭೇಟಿಯಾಗಿಲ್ಲ ಅನ್ನೋದು ತನಗೆ ಗೊತ್ತಿಲ್ಲ, ಪ್ರಾಯಶಃ ಚುನಾವಣೆ ಕೆಲಸದಲ್ಲಿ ವ್ಯಸ್ತರಾಗಿರಬಹುದು ಎಂದ ಹೇಳಿದ ಅವರು, ಈಶ್ವರಪ್ಪ ಆಡುತ್ತಿರುವ ಮಾತುಗಳನ್ನು ಮತ್ತು ಅವರು ಎತ್ತಿರುವ ಪ್ರಶ್ನೆಗಳನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವುಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು
ಸಮಸ್ಯೆಗಳನ್ನು ಪಕ್ಷಕ್ಕೆ ಮುಜುಗುರವಾಗದ ಹಾಗೆ ಬಗೆಹರಿಸಿದರೆ ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಸುಲಭವಾಗುತ್ತದೆ ಎಂದು ಯತ್ನಾಳ್ ಹೇಳಿದರು