ಬಳ್ಳಾರಿ:- ಯತ್ನಾಳ್ ನಮ್ಮ ಸಮುದಾಯದವರು, ಬಲಿಪಶು ಆಗ್ಬಾರ್ದು ರೇಣುಕಾಚಾರ್ಯ ಹೇಳಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಹರಿಹಾಯ್ತಿದ್ದ ರೇಣುಕಾಚಾರ್ಯ ಇದೀಗ ಯತ್ನಾಳ್ ಪರ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ. ಯತ್ನಾಳ್ ನಮ್ಮ ಸಮುದಾಯದ ನಾಯಕ. ಅವರ ಮುಖಾಂತರ ಕೆಲವರು ಮಾತನಾಡಿಸ್ತಿದ್ದಾರೆ. ಅವರು ಬಲಿಪಶು ಆಗಬಾರದು ಅನ್ನೋದು ನಮ್ಮ ಉದ್ದೇಶ.
ಮೊದಲೆಲ್ಲಾ ನಾನು ಯತ್ನಾಳ್ ಚೆನ್ನಾಗಿದ್ದೇವೆ. ಅವರ ಮೇಲೆ ಈಗಲೂ ಗೌರವ ಇದೆ. ಆದರೆ ಕೆಲವು ದುಷ್ಟ ಶಕ್ತಿಗಳು ನಮ್ಮನ್ನ ದೂರ ಮಾಡಿದ್ವು. ಷಡ್ಯಂತ್ರ ಮಾಡಿದವರಿಗೆ ಉತ್ತರ ಕೊಡಬೇಕಿದೆ. ಅವರನ್ನ ಬಲಿಪಶು ಮಾಡ್ತಿದ್ದಾರೆ. ಯತ್ನಾಳ್ ನಮ್ಮ ಶತ್ರು ಅಲ್ಲ ಎಂದರು.
ನಾನು ಬೇಡ ಜಂಗಮ ಸಮುದಾಯದ ಸರ್ಟಿಫಿಕೇಟ್ ತಗೊಂಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ನಾನು ವೀರ ಶೈವ ಲಿಂಗಾಯತ ಎಂದು ಬರೆಸಿದ್ದೇನೆ. ನಾನು ಯಾವುದೇ ಬೇಡ ಜಂಗಮ ಸರ್ಟಿಫಿಕೇಟ್ ತಗೊಂಡಿಲ್ಲ. ನನ್ನ ಅಫಿಡವಿಟ್ನಲ್ಲಿ ವೀರಶೈವ ಲಿಂಗಾಯತ ಎಂದಿದೆ. ಮಾ. 16ರಂದು ದಾಖಲೆ ಬಿಡುಗಡೆ ಮಾಡುತ್ತೇನೆ. ವೀರಶೈವರು ಒಂದಾದ್ರೆ ಈ ದೇಶವನ್ನ ಆಳುತ್ತಾರೆ. ಆದರೆ ಒಂದಾದರೆ ಮಾತ್ರ ಎಂದು ವೀರೇಂದ್ರ ಹೆಗಡೆ ಅವರು ಹೇಳಿದ್ದರು. ಅದಕ್ಕಾಗಿ ನಾವು ಈಗ ಒಂದಾಗ್ತಿದ್ದೇವೆ ಎಂದು ಹೇಳಿದರು