ದಾವಣಗೆರೆ:- ರಾಜ್ಯದಲ್ಲಿ ಬಿಜೆಪಿ ಪಕ್ಷದ ಹಿನ್ನಡೆಗೆ ಯತ್ನಾಳ್ ನೇರ ಕಾರಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ದಿನ ಬೆಳಗಾದ್ರೆ BSY, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ಯತ್ನಾಳ್ ನೇರ ಕಾರಣ. ರಾಜ್ಯದ ಜನ ವಿಜಯೇಂದ್ರ ನಾಯಕತ್ವವನ್ನ ಒಪ್ಪಿದ್ದಾರೆ. ಬಸನಗೌಡ ಯತ್ನಾಳ್ ತಂಡಕ್ಕೆ ಬೆಲೆ ಕೊಡಬೇಡಿ.
ಯಾವ ಕಾರಣಕ್ಕೂ ವಿಜಯೇಂದ್ರ ಅಧ್ಯಕ್ಷ ಸ್ಥಾನ ಬದಲಾಗಲ್ಲ. ಮುಂದಿನ ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ. ಬಸನಗೌಡ ಯತ್ನಾಳ್ ತೋಳ, ವಿಜಯೇಂದ್ರ ಹೋರಿ. ಹೋರಿ ಮುಂದೆ ಓಡುತ್ತಿದ್ರೆ ತೋಳ ಹಿಂದೆ ಓಡುತ್ತಿತ್ತು. ತೋಳ ಏನು ನೋಡಿ ಓಡುತ್ತಿತ್ತು ಆದರೆ, ಅದು ಸಿಗಲಿಲ್ಲ ಎಂದು ವ್ಯಂಗ್ಯವಾಡಿದರು.