ಬೆಂಗಳೂರು:- ಕೋವಿಡ್ನಲ್ಲಿ 40 ಸಾವಿರ ಕೋಟಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ MP ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಯತ್ನಾಳ್ ಒಬ್ಬ ಕಾಮಿಡಿ ಪೀಸ್. ಅವರಿಗೆ ನಾಲಿಗೆಗೂ ಮೆದುಳಿಗೂ ಲಿಂಕೇ ಇಲ್ಲ. ಮೊದಲ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕು.
ಯತ್ನಾಳ್ ಒಬ್ಬ ಹುಚ್ಚು ನಾಯಿ, ನನ್ನನ್ನು ಅವರಿಗೆ ಹೋಲಿಕೆ ಮಾಡಬೇಡಿ. ಬಸನಗೌಡ ಪಾಟೀಲ್ ಯತ್ನಾಳ್ ಗೆ ನಾನು ಸವಾಲು ಹಾಕ್ತೀನಿ. ಕಾಂಗ್ರೆಸ್ ಏಜೆಂಟ್ ರು ತರ ನೀವು ವರ್ತನೆ ಮಾಡ್ತಿದ್ಸೀರಿ. ಯಡಿಯೂರಪ್ಪ ವಿರುದ್ಧವಾಗಿ ಮಾತಾಡಿದ್ರೆ, ಸಿದ್ದರಾಮಯ್ಯ ಸರ್ಕಾರದಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳಬಹುದು.
ವಿಜಯಪುರದ ಒಬ್ಬ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ಗೆದ್ದಿದ್ದೀರಿ. ಕೊವೀಡ್ ಬಗ್ಗೆ ಸದನದಲ್ಲಿ ವಿಸ್ತೃತವಾಗಿ ಚರ್ಚೆ ಆಗಿದೆ. 40 ಸಾವಿರ ಕೋಟಿ ಹಗರಣ ಅಂತೀರಲ್ಲ, ದಾಖಲೆ ಸಮೇತ ಬನ್ನಿ ಚರ್ಚೆ ಮಾಡೋಣ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡ್ಜೊಂಡು ಈ ರೀತಿ ಆರೋಪ ಮಾಡ್ತಿದ್ದೀರಿ. ಉ ಕ ಭಾಗದ ಜನರು ಯಡಿಯೂರಪ್ಪರ ಬಗ್ಗೆ ಸಮಾಧಾನದಿಂದ ಇದ್ದಾರೆ. ಅಧಿವೇಶನದಲ್ಲಿ ಧಾರಾವಾಹಿ ತರ ಮಾತಾಡಿದ್ದೀರಿ. ಕಾಂಗ್ರೆಸ್ ವೈಫಲ್ಯ ಗಳ ಬಗ್ಗೆ ನೀವು ಮಾತಾಡಿಲ್ಲ.
ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತಾಡಿ ಲಾಭ ಮಾಡಿಕೊಳ್ತಿದ್ದೀರಿ. ಇದು ಮೋದಿಗೆ ನೀವು ಅಪಮಾನ ಮಾಡಿದಂತೆ. ನಾಲಿಗೆಗೂ ಮೆದಳಿಗೂ ಲಿಂಕೇ ಇಲ್ಲ, ಹುಚ್ಚನಂತೆ ಮಾತಾಡ್ತಿದ್ದಾರೆ. ಇವರನ್ನು ಮೊದಲು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ಯತ್ನಾಳ್ ರವರು ಕಾಂಗ್ರೆಸ್ಸಿನಿಂದ ಏನೇನು ಲಾಭ ಮಾಡಿಕೊಂಡಿದ್ಸಾರೆ ಎಂದು ಗೊತ್ತಿದೆ. ಯತ್ನಾಳ್ ಒಬ್ಬ ಕಾಮಿಡಿ ಪೀಸ್. ಮಂತ್ರಿ ಮಾಡಿಲ್ಲ, ವಿಪಕ್ಷ ನಾಯಕ ಮಾಡಿಲ್ಲ ಎಂದು ಅರೆ ಹುಚ್ಚನಂತೆ ಮಾತಾಡುತ್ತಿದ್ದಾರೆ.
ಇಂತಹವರನ್ನು ಇಟ್ಟುಕೊಂಡು ಏನು ಮಾಡಬೇಕು. ಜೊತೆಯಲ್ಲಿ ಇದ್ದವರಿಗೆ ಚಾಕು ಹಾಕ್ತಿದ್ದಾರೆ. ಮೊದಲು ಅವರನ್ನು ಉಚ್ಚಾಟನೆ ಮಾಡಬೇಕು. ನನ್ನ ಹೆಸರನ್ನು ಆ ಹುಚ್ಚು ನಾಯಿಗೆ ಹೋಲಿಕೆ ಮಾಡಬೇಡಿ. ಹುಚ್ಚು ನಾಯಿಯ ತರ ಬೊಗಳು ತಿರುತ್ತದೆ. 40 ಸಾವಿರ ಕೋಟಿ ಹಗರಣದ ಬಗ್ಗೆ ದಾಖಲೆ ತಗೊಂಡು ಬನ್ನಿ. ಇಲ್ಲ ಅಂದರೆ ರಾಜಕೀಯ ನಿವೃತ್ತಿ ಆಗಿ ಎಂದರು.