ವಿಜಯಪುರ:- ಆರೋಗ್ಯ ಸಚಿವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ಕೊಟ್ಟಿದ್ದಾರೆ.
ನಿಮ್ಮ ಮನೆ ಅಂದರೆ ಯಾವುದು? ಅವರ ಮನೆ ಹಿಂಗಿದೆ ಅಂತಾ ಯಾರಿಗೆ ಗೊತ್ತು, ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟರಿದ್ದಾರೆ. ಕಾಂಗ್ರೆಸ್ಸಿಗರು ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನ ಸಮರ್ಥಿಸಿಕೊಂಡರು, ಅದಕ್ಕೆ ಕಾಂಗ್ರೆಸ್ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿದ್ದು, ದಿನೇಶ್ ಗುಂಡೂರಾವ್ ಮನೆಯಲ್ಲಿ ಅಂದರೆ ಕಾಂಗ್ರೆಸ್ನಲ್ಲಿ ಅಂದ ಹಾಗೆ ಎಂದು ಸ್ಪಷ್ಟನೆ ನೀಡಿದರು.
MI V/s RCB: ಇಂದಿನ ಪಂದ್ಯಕ್ಕೆ ಎಂಟ್ರಿ ಕೊಡ್ತಾರಾ ವಿಲ್ ಜ್ಯಾಕ್ಸ್!, ತಂಡ ಬದಲಿಸುವ ಒತ್ತಡದಲ್ಲಿ RCB!
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದರೆ ಏನು ಮಾಡುವುದು. ನಾನು ಯಾವುದೇ ಸ್ತ್ರೀಲಿಂಗ, ಪುಲ್ಲಿಂಗ್ ಬಳಸಿಲ್ಲ. ಅದನ್ನ ಅವರಿಗೆ ( ಟಬು ) ಅಂದಿರುವುದಾಗಿ ತಿಳಿದುಕೊಂದರೆ ಯತ್ನಾಳ್ ಏನು ಮಾಡಕಾಗಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ವಿಚಾರ, ‘ಅವರ ಪ್ರಣಾಳಿಕೆ ಒಂದು ದುರಂತ, 370 ಕಲಂ ಮತ್ತೆ ಜಾರಿಗೆ ತರುತ್ತೇವೆ ಅಂತಾರೆ. ಅಂದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಇವರು ಭಾವಿಸಿಲ್ಲ. ಜೊತೆಗೆ ಅಲ್ಪ ಸಂಖ್ಯಾತರಿಗಾಗಿ ವಿಶೇಷ ಕಾನೂನು ಮಾಡುತ್ತೇವೆ ಅಂತಾರೆ, ಮುಸ್ಲಿಂ ಅವರ ಪರವಾಗಿ ವಿಶೇಷ ಕಾನೂನು ಮಾಡುತ್ತಾರೆ ಅಂದ್ರೆ 5 ವರ್ಷದಲ್ಲಿ ಪಾಕಿಸ್ತಾನ ಮಾಡುತ್ತಾರೆ ಎಂದರ್ಥ ಎಂದರು.
ನೀವು ಒಂದಾದರೂ ಹಿಂದೂಗಳ ಪರವಾಗಿ ಏನಾದರೂ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಅಯೋಧ್ಯೆ ರಾಮನಿಗೆ ವಿರೋಧ ಮಾಡಿದ ನಾಲಾಯಕರು ಕಾಂಗ್ರೆಸ್ಸಿಗರು ಎಂದು ಕಿಡಿಕಾರಿದರು