ಬೆಂಗಳೂರು:- ವಕ್ಫ್ ವಿರುದ್ಧ 3ನೇ ಹಂತದ ಹೋರಾಟಕ್ಕೆ ಯತ್ನಾಳ್ ಬಣ ಸಜ್ಜಾಗಿದ್ದು, ಮತ್ತೊಂದೆಡೆ ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ ವಿಜಯೇಂದ್ರ ಸಭೆ ನಡೆಸಲಿದ್ದಾರೆ.
ಒತ್ತಾಯ ಪೂರ್ವಕ ಬಂದ್ : ಅವಳಿ ನಗರದ ಜನತೆ ಹಿಡಿಶಾಪ, ಆಸ್ಪತ್ರೆ ,ಕೂಲಿಗೆ ತೆರಳುವವರಿಗೆ ಟ್ರಬಲ್
ವಕ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ನಿಲ್ಲೋದಿಲ್ಲ, 3ನೇ ಹಂತದ ಹೋರಾಟವನ್ನೂ ಮಾಡುತ್ತೇವೆ ಅಂತಾ ಶಾಸಕ ಯತ್ನಾಳ್ ಕರೆ ಕೊಟ್ಟಿದ್ದಾರೆ.
ಇತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷವನ್ನ ಸಂಘಟಿಸುವ ಕೆಲಸದಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಪಕ್ಷವನ್ನ ಒಗ್ಗಟ್ಟಾಗಿ ತೆಗೆದುಕೊಂಡುವ ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತಿರುವವರ ಜೊತೆ ನಾಳೆ ಸಭೆ ಮಾಡಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಜಯೇಂದ್ರ ಸಭೆ ಕರೆದಿದ್ದಾರೆ. ಚುನಾವಣೆಯಲ್ಲಿ ಸೋತಿರೋದು ಒಂದುಕಡೆಯಾದರೆ, ಮುಂದೆ ಯಾವ ರೀತಿಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಅಂತಾ ಚರ್ಚೆ ನಡೆಸಲಿದ್ದಾರೆ. ಇನ್ನು ಮುಂದೆ ಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳ ಬಗ್ಗೆಯೂ ಚರ್ಚೆ ಮಾಡುವ ಸಾಧ್ಯತೆ ಇದೆ.
ಸರ್ಕಾರದ ವಿರುದ್ಧ 60 ಪರ್ಸೆಂಟೇಜ್ ಕಮಿಷನ್ ಆರೋಪಿಸಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪದೇ ಪದೇ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ಎಸ್ಟಿಎಸ್, ಇವತ್ತು ಕುಮಾರಸ್ವಾಮಿ ವಿರುದ್ಧ ಸಿಡಿದೆದ್ರು. ಮಗನ ಚುನಾವಣೆಗೆ 100 ಕೋಟಿ ರೂ. ಖರ್ಚು ಮಾಡಿದ್ರಿ, ಏನ್ ಅಲೂಗಡ್ಡೆ ಬೆಳೆದು ಸಂಪಾದನೆ ಮಾಡಿದ್ರಾ? ಗಾಳಿಯಲ್ಲಿ ಗುಂಡು ಹೊಡೆಯೋದು ಮೊದಲು ಬಿಡಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.