ಹುಬ್ಬಳ್ಳಿ: ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಪ್ರತಿಭಟನೆ ಸಭೆಯೊಂದರಲ್ಲಿ ವಿಶ್ವ ಗುರು ಬಸವೇಶ್ವರ ಅವರ ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಹೇಳಿಕೆ ನೀಡಿದ್ದು ಖಂಡನೀಯವಾಗಿದ್ದು, ಹೇಳಿಕೆ ಹಿಂಪಡೆಯಬೇಕು ಎಂದು ಧಾರವಾಡ ಜಿಲ್ಲಾ ಘಟಕದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಎಮ್.ವ್ಹಿ. ಗೊಂಗಡಶೆಟ್ಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ವ್ಯಕ್ತಿತ್ವ ಘನತೆ ಅರಿಯದೆ ಯತ್ನಾಳ ಅವರು ಅವಹೇಳನ ಹೇಳಿಕೆ ನೀಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಭರದಲ್ಲಿ ಗುರುಬಸವಣ್ಣನವರಿಗೆ ಅವಮಾನ ಮಾಡಿದ ಯತ್ನಾಳ ಅವರು ಸಮಸ್ತ ಬಸವ ಭಕ್ತರ ಕ್ಷಮೆ ಕೇಳಿ ಹೇಳಿಕೆ ಹಿಂಪಡೆಯಬೇಕು.
PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ
ಇಲ್ಲದಿದ್ದರೆ ಮಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷರಾದ ಜಿ.ಬಿ.ಹಳ್ಯಾಳ, ಗುರುಬಸವ ಮಂಟಪದ ಸಂಚಾಲಕರಾದ ಶಶಿಧರ ಕರವೀರಶೆಟ್ಟರ್, ಲಿಂಗಾಯತ ಧರ್ಮ ಮಹಾಸಭಾ ಕಾರ್ಯದರ್ಶಿ ಎಸ್.ವ್ಹಿ.ಜೋಡಳ್ಳಿ ಉಪಸ್ಥಿತರಿದ್ದರು.