ಕಲಬುರಗಿ: ಯತೀಂದ್ರ ಸೂಪರ್ ಸಿಎಂ ಆಗಿ ಮಾತಾಡ್ತಿರೋದು ನೋಡಿದ್ರೆ ಈ ಸರ್ಕಾರ ಎಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಗೊತ್ತಾಗುತ್ತೆ.ಹೀಗಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಶ್ರೀರಾಮುಲು ಕೈ ಸರ್ಕಾರದ ವಿರುದ್ಧ ಕಿಡಿಕಾರಿದರು.
ಅಧಿಕಾರಿಗಳಿಗೆ ಫೋನ್ ಮಾಡಿ ಆ ಕೆಲಸಗಳ ಆಗ್ಬೇಕು ಈ ಕೆಲಸಗಳು ಆಗಬೇಕು ಅಂತ ಯತೀಂದ್ರ ಸರ್ಕಾರದ ಆದೇಶದಂತೆ ಮಾತಾಡ್ತಿದ್ದಾರೆ..ಅದಕ್ಕಾಗಿ ಇದು 60-70 ಪರ್ಸೆಂಟ್ ಸರ್ಕಾರ..ಹೀಗಾಗಿ ಈ ವಿಚಾರಕ್ಕೆ ಸಿಎಂ ಸಿದ್ರಾಮಯ್ಯ ಸ್ಪಷ್ಟನೆ ಕೊಡಬೇಕು ಅಂತ ಆಗ್ರಹಿಸಿದ್ರು.