ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಮಗಳು 6ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಇತ್ತೀಚೆಗಷ್ಟೇ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಯಶ್ ರಾಧಿಕಾ ಇದೀಗ ಮುದ್ದು ಮಗಳ ಬರ್ತಡೇಯನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಯಶ್ ಬಿಡುವು ಮಾಡಿಕೊಂಡು ಮಗಳ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಐರಾ ಬರ್ತ್ ಡೇ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2018ರ ಡಿಸೆಂಬರ್ 2 ರಂದು ಮುದ್ದು ಪುಟಾಣಿ ಐರಾಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ರು. ಯಶ್ ಮಗಳು ಐರಾಗೆ 6 ವರ್ಷ ತುಂಬಿದೆ. ಯಶ್ ಮಗಳು ಐರಾಗೂ ಸಾಕಷ್ಟು ಫ್ಯಾನ್ಸ್ ಇದ್ದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಐರಾಗೆ ವಿಶ್ ಮಾಡಿದ್ದಾರೆ.
ಡಾಲ್ ಹೌಸ್ ಥೀಮ್ ನಲ್ಲಿ ಐರಾ ಬರ್ತ್ ಡೇ ಪಾರ್ಟಿಯನ್ನು ಆಯೋಜಿಸಿದ್ರು. ಖಾಸಗಿ ಹೋಟೆಲ್ ನಲ್ಲಿ ನಡೆದ ಐರಾ ಬರ್ತ್ ಡೇ ಪಾರ್ಟಿಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬಸ್ಥರು ಹಾಗೂ ಆಪ್ತರು ಕೂಡ ಭಾಗಿಯಾಗಿದ್ರು. ಟಾಕ್ಸಿಕ್ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು.
ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ರಾಧಿಕಾ ಪಂಡಿತ್ ತನ್ನ ಮಗಳ 6ನೇ ವರ್ಷಕ್ಕೆ ವಿಡಿಯೋ ಮೂಲಕ ಫೋಟೋ ಹಂಚಿಕೊಂಡಿದ್ರು. ಇನ್ನು ಯಶ್ ಶೇರ್ ಮಾಡಿಕೊಂಡಿರವ ಕ್ಯೂಟ್ ವಿಡಿಯೋಗೆ ಲೈಕ್ಸ್ ಸುರಿಮಳೆ ಬಂದಿವೆ.
ಐರಾ ಮಗುವಾಗಿನಿಂದ, ಈಗಿನವರೆಗಿನ ಫೋಟೋಗಳು ಇವೆ. ಯಶ್ ಹಾಗೂ ರಾಧಿಕಾ ಜತೆ ಐರಾ ಕಳೆದ ಸಂಭ್ರಮ ಕ್ಷಣಗಳು, ತಮ್ಮನೊಂದಿಗೆ ಆಟವಾಡಿದ ಕ್ಷಣಗಳು ಇವೆ. ಐರಾ ಮೊದಲ ಹುಟ್ಟುಹಬ್ಬವನ್ನು ಫನ್ ವರ್ಲ್ಡ್ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಇಡೀ ಫನ್ ವರ್ಲ್ಡ್ನ ಬುಕ್ ಮಾಡಿಕೊಂಡು ಸ್ನೇಹಿತರು ಮತ್ತು ಸಿನಿಮಾ ಗಣ್ಯರ ಜೊತೆ ಆಚರಿಸಿದ್ದರು.
ಯಶ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದು, ರಾಧಿಕಾ ಮಕ್ಕಳ ಲಾಲನೆ–ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಆಗಾಗ ಯಶ್ ಹಾಗೂ ರಾಧಿಕಾ ಪಂಡಿತ್ ವೆಕೇಷನ್ ಎಂಜಾಯ್ ಮಾಡಿರುವ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ 4 ವರ್ಷ ಕಳೆದಿದ್ದು, 2023ಕ್ಕೆ ಯಶ್ ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿದ್ರು.ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಿಡುವಿಲ್ಲದೆ ನಡೆಯುತ್ತಿದೆ.
ಗೀತು ಮೋಹನ್ದಾಸ್ ಟಾಕ್ಸಿಕ್ಗಾಗಿ ಒಟ್ಟು 200 ದಿನಗಳ ಚಿತ್ರೀಕರಣದ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಅದರಲ್ಲಿ 150 ದಿನಗಳ ಶೆಡ್ಯೂಲ್ ಲಂಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡಲಿದ್ದಾರಂತೆ.