ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾವನ್ನು ಚಿತ್ರತಂಡ ಸಾಕಷ್ಟು ಮುತುವರ್ಜಿ ವಹಿಸಿ ಶೂಟ್ ಮಾಡುತ್ತಿದೆ. ಆದರೆ ಇದೀಗ ಚಿತ್ರದ ಪ್ರಮುಖ ದೃಷ್ಯವೊಂದು ಸೋರಿಕೆಯಾಗಿದ್ದು ಚಿತ್ರತಂಡಕ್ಕೆ ತಲೆಬಿಸಿ ಶುರುವಾಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಸೆಟ್ಗಳನ್ನು ಹಾಕಿ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ. ಆದರೆ, ಈಗ ಚಿತ್ರದ ದೃಶ್ಯ ಒಂದು ಲೀಕ್ ಆಗಿರೋದು ಚಿತ್ರತಂಡಕ್ಕೆ ತಲೆಬಿಸಿ ಶುರುವಾಗಿದೆ.
ಯಶ್ ಅವರು ಯಾವುದೋ ಪ್ರಮುಖ ವ್ಯಕ್ತಿಯನ್ನು ಮೀಟ್ ಮಾಡುತ್ತಿರುವ ದೃಶ್ಯ ಇದಾಗಿದೆ. ಇಲ್ಲಿ ಸಿನಿಮಾದ ಅದ್ದೂರಿ ಸೆಟ್ ಗಮನ ಸೆಳೆದಿದೆ. ಯಶ್ ಅವರ ಗೆಟಪ್ ಕೂಡ ಗಮನ ಸೆಳೆದಿದೆ. ಈ ದೃಶ್ಯವನ್ನು ಸೆರೆ ಹಿಡಿದಿದ್ದು ಸೆಟ್ನಲ್ಲಿ ಇದ್ದವರಲ್ಲೇ ಒಬ್ಬರು ಎನ್ನಲಾಗಿದೆ.
ಈಗಾಗಲೇ ಹಲವು ಸಿನಿಮಾ ಸೆಟ್ಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಸಿನಿಮಾದ ಸೆಟ್ ಹಾಗೂ ದೃಶ್ಯಗಳು ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿಯ ಕಠಿಣ ನಿಯಮ ತಂದ ಉದಾಹರಣೆ ಇದೆ.