ಸಾಮಾನ್ಯವಾಗಿ ಇನಿಂಗ್ಸ್ನ 19ನೇ ಹಾಗೂ 20ನೇ ಓವರ್ ಬೌಲಿಂಗ್ ಮಾಡಲು ಕ್ಯಾಪ್ಟನ್ಸ್ ತಮ್ಮ ಫಾಸ್ಟ್ ಬೌಲರ್ಗಳನ್ನು ನೆಚ್ಚಿಕೊಳ್ಳುತ್ತಾರೆ. ಪರಿಣತ ಸ್ಪಿನ್ನರ್ಗಳಿಗೂ ಕೆಲವೊಮ್ಮೆ ಡೆತ್ ಓವರ್ಸ್ ಬೌಲಿಂಗ್ ಸಿಕ್ಕ ಉದಾಹರಣೆಗಳಿವೆ. ಆದರೆ, ಪಾರ್ಟ್ ಟೈಮ್ ಸ್ಪಿನ್ನರ್ಗಳೊಂದ ಡೆತ್ ಓವರ್ಸ್ ಬೌಲಿಂಗ್ ಮಾಡಿಸಿ ಯಶಸ್ಸು ಕಂಡ ಕೀರ್ತಿ ಈಗ ಭಾರತ ಟಿ20 ಕ್ರಿಕೆಟ್ ತಂಡದ ನೂತನ ನಾಯಕ ಸೂರ್ಯಕುಮಾರ್ ಯಾದವ್ಗೆ ಸಲ್ಲುತ್ತದೆ.
ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸ್ಪಿನ್ನರ್ಗಳಿಗೆ ಭಾರಿ ಬೆಂಬಲ ನೀಡುತ್ತಿತ್ತು. ಹೆಚ್ಚು ತಿರುವಿದ್ದ ಕಾರಣ ಅಂತಿಮ 2 ಓವರ್ಗಳ ಬೌಲಿಂಗ್ ಸಲುವಾಗಿ ಸೂರ್ಯ ಸ್ಪಿನ್ನರ್ಸ್ ಮೊರೆ ಹೋದರು. ಯಾರೊಬ್ಬರೂ ಅಂದಾಜಿಸದ ಮಾದರಿ 19ನೇ ಓವರ್ನ ರಿಂಕು ಸಿಂಗ್ಗೆ ಕೊಟ್ಟು 20ನೇ ಓವರ್ನ ಖುದ್ದಾಗಿ ಬೌಲಿಂಗ್ ಮಾಡಿದರು. ಈ ಎರಡು ಓವರ್ಗಳಲ್ಲಿ ಭಾರತ ತಂಡ 8 ರನ್ ಮಾತ್ರ ಕೊಟ್ಟು ಒಟ್ಟು4 ವಿಕೆಟ್ ಪಡೆದು ಪಂದ್ಯ ಸೂಪರ್ ಓವರ್ಗೆ ಕಾಲಿಡುವಂತೆ ಮಾಡಿತು.
Banana: ಸಿಪ್ಪೆ ಮೇಲೆ ಕಪ್ಪು ಚುಕ್ಕೆಗಳಿರೋ ಬಾಳೆಹಣ್ಣು ತಿನ್ನಬಹುದಾ..? ಇಲ್ಲಿದೆ ಮಾಹಿತಿ
“ತಮ್ಮಾ, ರೋಹಿತ್ ಚೇಲಾ ಸೂರ್ಯ, 19ನೇ ಓವರ್ ರಿಂಕು ಅವರಿಂದ, 20ನೇ ಓವರ್ ಸ್ಕೈ ಖುದ್ದಾಗಿ ಬೌಲ್ ಮಾಡಿ ಪಂದ್ಯ ಗೆದ್ದುಕೊಟ್ಟಿದ್ದಾರೆ. ಒಬ್ಬ ಮಹಾನ್ ನಾಯಕ ಎನಿಸಿಕೊಳ್ಳಲು ಇನ್ನೇನು ಮಾಡಬೇಕು?,” ಎಂದಿರುವ ಮೊಹಮ್ಮದ್ ಕೈಫ್, ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಕ್ಯಾಪ್ಟನ್ಸಿಯಲ್ಲಿ ಸಾಮ್ಯತೆ ಇದೆ ಎಂಬ ಸಂದೇಶ ಸಾರಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದಲ್ಲಿ ದೀರ್ಘಕಾಲ ಆಡಿದ ಅನುಭವ ಸೂರ್ಯ ಅವರಲ್ಲಿದೆ.