ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಸೋತಿತ್ತು. ಆಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ್ದ ಭಾರತ, ಇದೀಗ ಅಗ್ರಸ್ಥಾನಕ್ಕೇರಿದೆ.
ಭಾರತ ತಂಡ ಸದ್ಯ ಈ ಗೆಲುವಿನಿಂದಾಗಿ ಆಡಿದ ಮೂರು ಟೆಸ್ಟ್ಗಳಲ್ಲಿ ಒಂದು ಸೋಲು 2 ಗೆಲುವು ಮತ್ತು 1 ಡ್ರಾ ಸಾಧಿಸಿ ಶೇ. 54.16 ಗೆಲುವಿನ ಪ್ರತಿಶತದೊಂದಿಗ ಅಗ್ರಸ್ಥಾನ ಪಡೆದಿದೆ. ಶೇ. 50 ಗೆಲುವಿನ ಪ್ರತಿಶತ ಸಾಧಿಸಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ನಿಗದಿತ ಅವಧಿಯೊಳಗೆ ಓವರ್ ಪೂರ್ಣಗೊಳಿಸಿದ ಕಾರಣಕ್ಕೆ ಭಾರತ ತಂಡಕ್ಕೆ ಐಸಿಸಿ ದಂಡ ವಿಧಿಸಿತ್ತು. ಈ ಪರಿಣಾಮ -2 ಫೆನಾಲ್ಟಿ ಅಂಕವೂ ಕೂಡ ಭಾರತಕ್ಕೆ ಸಿಕ್ಕಿದೆ.
ನ್ಯೂಜಿಲ್ಯಾಂಡ್ ತಂಡ ಗೆಲುವಿನ ಶೇಕಡಾವಾರು 50 ರೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಶೇಕಡಾ 50 ರೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಮತ್ತೆ ಮೇಲೇರುವ ಅವಕಾಶ ಕಮಿನ್ಸ್ ಬಳಗದ ಮುಂದಿದೆ. ವೆಸ್ಟ್ ಇಂಡೀಸ್ 16.67 ಶೇಕಡಾದೊಂದಿಗೆ ಏಳನೇ ಮತ್ತು ಇಂಗ್ಲೆಂಡ್ 15 ಶೇಕಡಾದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ 45.83 ಶೇಕಡಾವಾರು ಅಂಕದೊಂದಿಗೆ 5ನೇ ಸ್ಥಾನ ಪಡೆದಿದೆ.