ಕಲಬುರಗಿ: ನನ್ನ ವಿರುದ್ಧ ಹೈಕಮಾಂಡ್ʼಗೆ ಪತ್ರ ಬರೆಯುತ್ತಿರುವುದು ಹೊಸದೇನಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಹೈಕಮಾಂಡ್ಗೆ ಪತ್ರ ಬರೆಯುತ್ತಿರುವುದು ಹೊಸದೇನಲ್ಲ. ಬಹಳ ಸಲ ಬರೆಯಲಾಗಿದೆ. ನನ್ನ ವಿರುದ್ಧ ನೀಡಿರುವ ದೂರುಗಳು ಒಂದು ರೂಂ ತುಂಬಿ ಹೋಗಿವೆ.
ಆದರೆ ಏನೂ ಮಾಡಲು ಆಗಲ್ಲ. ಮುಂದೊಂದು ದಿನ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತದೆ ಎಂದು ಹೇಳಿದರು. ನಾವು ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ನಾವು ಪಕ್ಷದಲ್ಲೇ ಇದ್ದೇವೆ. ಭಾರತ ಮಾತಾ ಕೀ ಜೈ, ಅಟಲ್ ಬಿಹಾರಿ ವಾಜಪೇಯಿ ಕೀ ಜೈ, ಪ್ರಧಾನಿ ನರೇಂದ್ರ ಮೋದಿ ಕೀ ಜೈ ಅಂತಾನೇ ಹೇಳುತ್ತಿದ್ದೇವೆ.
PM Usha Scholarship: PUC ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹20,000 ಆರ್ಥಿಕ ನೆರವು.! ಇಂದೇ ಅರ್ಜಿ ಸಲ್ಲಿಸಿ
ನಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಉಪಚುನಾವಣೆಯಲ್ಲಿ ಆಗಿರುವ ಸೋಲಿನ ಹೊಣೆಯನ್ನು ಎಲ್ಲಾ ನಾಯಕರು ಹೊರಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗೆದ್ದರೆ ಅವರು ಹೊರಬೇಕು. ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ ಮಾತ್ರಕ್ಕೆ ನಾವೆಲ್ಲ ಕೇಳಬೇಕು ಎಂದು ವ್ಯಂಗ್ಯವಾಡಿದರು.