ದಾವಣಗೆರೆ:- ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ ಎಂದು ಹೇಳುವ ಮೂಲಕ ಸಂಸದ ಸಿದ್ದೇಶ್ವರ್ ಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಂಸದ ಸಿದ್ದೇಶ್ವರ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ತಮಗೆ ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಅನ್ನದಲ್ಲಿ ವಿಷ ಹಾಕಿ ಮುಗಿಸ್ತಾರೆ ಅಂತಾ ಸಂಸದರು ಹೇಳಿಕೊಂಡಿದ್ದಾರೆ. ಜಿ.ಎಂ.ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪ ಬಗ್ಗೆ ನನಗೆ ಗೌರವವಿದೆ. ಅವರು 2 ಸಲ ಸಂಸದರಾಗಿದ್ದರು, ಸಿದ್ದೇಶ್ವರ 4 ಬಾರಿ ಸಂಸದರಾಗಿದ್ದಾರೆ. ದಾವಣಗೆರೆ ಸಂಸದ ಸಿದ್ದೇಶ್ವರ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹೀಗಾಗಿ ಈ ಬಾರಿ ದಾವಣಗೆರೆ ಜಿಲ್ಲೆಯವರಿಗೆ ಅವಕಾಶ ಕಲ್ಪಿಸಲಿ. ಪಕ್ಷದ ವರಿಷ್ಠರು ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವೆ ಮಾಡಲಿ. ಸರ್ವೆಯಲ್ಲಿ ಯಾರ ಹೆಸರು ಬರುತ್ತೋ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿ ಎಂದು ಹೇಳುವ ಮೂಲಕ ಈ ಬಾರಿ ಯುವಕರಿಗೆ ಅವಕಾಶಕೊಡಿ ಎಂದರು.
ಈ ಮೂಲಕ ರೇಣುಕಾಚಾರ್ಯ ಅವರು ಪರೋಕ್ಷವಾಗಿ ದಾವಣಗೆರೆ ಲೋಕಸಭಾ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಇದರೊಂದಿಗೆ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್ಗೆ ತೊಡೆತಟ್ಟಿದ್ದಾರೆ.