ಬೆಂಗಳೂರು:- ನನ್ನ ಕೈಯಲ್ಲಿ ಆಗಲ್ಲ ಕ್ಷಮಿಸಿ ಎಂದು ಡೆತ್ ನೋಟ್ ಬರೆದಿಟ್ಟು ಮಂತ್ರಿಮಾಲ್ ನಲ್ಲಿ ವ್ಯಕ್ತಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮಂಜುನಾಥ್ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. ಸಾಲ ತೀರಿಸಲಾಗದೆ ಡೆತ್ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ‘2 ಕೋಟಿ ಸಾಲ ಮಾಡಿಕೊಂಡಿದ್ದೇನೆ. ಅದನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಜೀವನದಲ್ಲಿ ನೊಂದಿದ್ದೀನಿ. ಸಾಲ ತೀರಿಸಲು ತುಂಬಾ ಪ್ರಯತ್ನ ಮಾಡಿದೆ. ಸದ್ಯದ ಪರಿಸ್ಥಿಯಲ್ಲಿ ಸಾಲ ತೀರಿಸುವುದಕ್ಕೆ ಆಗ್ತಾ ಇಲ್ಲ. ಸಾಲ ಕೊಟ್ಟವರು ಎಲ್ಲ ಕ್ಷಮಿಸಿ ಎಂದು ಬರೆದಿಟ್ಟಿದ್ದಾರೆ