ಪ್ಯಾರಿಸ್: ವಿನೇಶ್ ಫೋಗಟ್ (Vinesh Phogat) ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
Paris Olympics: ಪುರುಷರ ಜಾವೆಲಿನ್ ಫೈನಲ್ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024) ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉಕ್ರೇನ್ನ (3 ಬಾರಿ CWG ಚಿನ್ನದ ಪದಕ ವಿಜೇತೆ) ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು.
ಇದು ವಿನೇಶ್ ಅವರ ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಆಗಿದೆ. ಫೈನಲ್ ಸ್ಥಾನಕ್ಕಾಗಿ ಕ್ಯೂಬಾದ ಯೂಸ್ನಿಲಿಸ್ ಗುಜ್ಮನ್ ಅವರನ್ನು ಎದುರಿಸಲಿದ್ದಾರೆ. ಗುಜ್ಮನ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ 2023 ರಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಇದಕ್ಕೂ ಮುನ್ನ ವಿನೇಶ್, ಜಪಾನ್ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ಗೆ ಅರ್ಹತೆ ಪಡೆದಿದ್ದರು. ಜಪಾನಿನ ಕುಸ್ತಿಪಟು ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಟೋಕಿಯೊ ಗೇಮ್ಸ್ನಲ್ಲಿ ಒಂದೇ ಒಂದು ಅಂಕ ಬಿಟ್ಟುಕೊಡದೆ ಚಿನ್ನ ಗೆದ್ದಿದ್ದರು.