RCB ವಿರುದ್ಧ ಯುಪಿ ವಾರಿಯರ್ಸ್ ಗೆದ್ದು ಬೀಗಿದೆ. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಡೆದ ಮೊದಲ ಸೂಪರ್ ಓವರ್ನಲ್ಲಿ ಯುಪಿ ವಾರಿಯರ್ಸ್ ಆರ್ಸಿಬಿ ವಿರುದ್ಧ ಗೆದ್ದು ಬೀಗಿದೆ. ಸೋಫಿ ಎಕ್ಲೆಸ್ಟೋನ್ ಅವರ ಆಲ್ರೌಂಡರ್ ಆಟದ ಪ್ರದರ್ಶನದಿಂದ ತವರಿನಲ್ಲಿ ಆರ್ಸಿಬಿ ಸೋತಿದೆ.
ಹಾಸನದಲ್ಲಿ ಕಾಡಾನೆ ದಾಳಿಗೆ ಯುವಕ ಬಲಿ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!
ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರ್ರಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಆರ್ಸಿಬಿ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 180 ರನ್ ಗಳಿಸಿತು. ಎಲ್ಲಿಸ್ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು. ಅವರಲ್ಲದೆ, ಡ್ಯಾನಿ ವ್ಯಾಟ್ ಕೂಡ 57 ರನ್ಗಳ ಕೊಡುಗೆ ನೀಡಿದರು. ಪೆರ್ರಿ ಡ್ಯಾನಿ ವ್ಯಾಟ್ ಜೊತೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.
ಮತ್ತೊಂದೆಡೆ, ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 180 ರನ್ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಆಲ್ ಔಟ್ ಆಯಿತು. ಈ ಪಂದ್ಯದಲ್ಲಿ ಶ್ವೇತಾ ಸೆಹ್ರಾವತ್ 31 ರನ್, ದೀಪ್ತಿ ಶರ್ಮಾ 25 ರನ್ ಮತ್ತು ಸೋಫಿ ಎಕ್ಲೆಸ್ಟೋನ್ ಅಜೇಯ 33 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಯುಪಿ ಗೆಲ್ಲಲು 18 ರನ್ಗಳು ಬೇಕಾಗಿದ್ದವು. ಈ ಓವರ್ ಅನ್ನು ರೇಣುಕಾ ಸಿಂಗ್ ಬೌಲ್ ಮಾಡಿದರು. ಈ ಓವರ್ನಲ್ಲಿ ಸೋಫಿ ಎಕ್ಲೆಸ್ಟೋನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲ್ಲಲು 1 ರನ್ ಅಗತ್ಯವಿತ್ತು. ಸ್ಟ್ರೈಕ್ನಲ್ಲಿದ್ದ ಕ್ರಾಂತಿ ಗೌಡ್ ಈ ಬಾಲನ್ನು ಹೊಡಿಯಲಾಗಲಿಲ್ಲ. ಹೀಗಾಗಿ ಚೆಂಡು ಕೀಪರ್ ಕೈಗೆ ಹೋಯಿತು. ಹೀಗಾಗಿ ರನ್ಗಾಗಿ ಓಡಿದ ಸೋಫಿ ಎಕ್ಲೆಸ್ಟೋನ್ ರನ್ ಔಟ್ ಆದರು, ಇದರಿಂದಾಗಿ ಪಂದ್ಯವು ಟೈ ಆಯಿತು.
ಸೂಪರ್ ಓವರ್ನಲ್ಲಿ ಯುಪಿ ವಾರಿಯರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 6 ಎಸೆತಗಳಲ್ಲಿ ಕೇವಲ 8 ರನ್ ಕಲೆಹಾಕಿತು. ಅಂತಿಮವಾಗಿ, ಆರ್ಸಿಬಿಗೆ ಗೆಲ್ಲಲು 9 ರನ್ಗಳ ಗುರಿ ಸಿಕ್ಕಿತು. ಆದರೆ ಈ ಬಾರಿ ಸೋಫಿ ಎಕ್ಲೆಸ್ಟೋನ್ ಬೌಲಿಂಗ್ನಲ್ಲಿ ಅದ್ಭುತಗಳನ್ನು ಮಾಡಿ ಆರ್ಸಿಬಿಯಿಂದ ಜಯವನ್ನು ಕಸಿದುಕೊಂಡರು. ಈ ಓವರ್ನಲ್ಲಿ ಸೋಫಿ ಎಕ್ಲೆಸ್ಟೋನ್ ಕೇವಲ 4 ರನ್ಗಳನ್ನು ನೀಡಿದರು, ಇದರಿಂದಾಗಿ ಯುಪಿ ವಾರಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ರನ್ಗಳಿಂದ ಸೋಲಿಸಿತು