ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ತಂಡವು 6 ವಿಕೆಟ್ ಗಳ ಜಯ ಸಾಧಿಸಿದೆ.
ಅಕ್ಷರ ದೀವಿಗೆ ನಂದಿಸಲು ಹೊರಟ ಕಾಂಗ್ರೆಸ್: ಸರ್ಕಾರದ ನಡೆ ಅವಿವೇಕದ ಪರಮಾವಧಿ ಎಂದ ಬಿವೈ ವಿಜಯೇಂದ್ರ!
ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಂಟಿಂಗ್ಗೆ ಇಳಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಗುಜರಾತ್ ತಂಡಕ್ಕೆ 144 ರನ್ ಗಳ ಗುರಿ ನೀಡಿತು.
144 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಗೆಲುವು ಕಂಡಿತು. ಗುಜರಾತ್ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ 5 ಫೋರ್ ಹಾಗೂ 3 ಸಿಕ್ಸ್ ಸಿಡಿಸುವ ಮೂಲಕ 29 ಎಸೆತಗಳಿಗೆ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಒಟ್ಟು 32 ಎಸೆತಗಳಿಗೆ 52 ರನ್ ಗಳಿಸಿ ಆಶ್ಲೇ ಗಾರ್ಡ್ನರ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹರ್ಲಿನ್ ಡಿಯೋಲ್ ಅಯೇಜ 34 ರನ್, ಡಿಯಾಂಡ್ರ ಡಾಟಿನ್ ಅಜೇಯ 33 ರನ್ ಜವಾಬ್ದಾರಿಯುತ ಬ್ಯಾಟಿಂಗ್ನೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.