ಐಪಿಎಲ್ ಮೆಗಾ ಹರಾಜಿನ ಸಿದ್ದತೆಯ ನಡುವೆಯೇ ವನಿತಾ ಪ್ರೀಮಿಯರ್ ಲೀಗ್ ಗೂ ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನಲ್ಲಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್ ಸಿಬಿಯು ಈ ಬಾರಿ ಆರು ಆಟಗಾರರನ್ನು ಬಿಡುಗಡೆ ಮಾಡುತ್ತಿದೆ.
Shah Rukh Khan: ನಟ ಶಾರುಖ್ ಖಾನ್ʼಗೆ ಜೀವ ಬೆದರಿಕೆ: ಎಲ್ಲಿಂದ ಬಂತು ಕರೆ? ಆ ವ್ಯಕ್ತಿ ಯಾರು ಗೊತ್ತಾ..?
ಆರ್ಸಿಬಿ ಮಿನಿ ಹರಾಜಿಗೂ ಮುನ್ನ 7 ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಉಳಿದಂತೆ 14 ಆಟಗಾರ್ತಿಯರನ್ನು ತನ್ನಲ್ಲೇ ಉಳಿಸಿಕೊಂಡಿದೆ.ಆದರೆ ಐಪಿಎಲ್ನಂತೆ ಡಬ್ಲ್ಯುಪಿಎಲ್ನಲ್ಲಿ ಮೆಗಾ ಹರಾಜು ಇರುವುದಿಲ್ಲ. ಬದಲಿಗೆ ಮಿನಿ ಹರಾಜು ಇರಲಿದೆ. ಹೀಗಾಗಿ ಫ್ರಾಂಚೈಸಿಗಳು ಗರಿಷ್ಠ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿವೆ.
ಬಿಸಿಸಿಐ ನಿಯಮದಂತೆ ಪ್ರತಿ ಫ್ರಾಂಚೈಸಿ 18 ಆಟಗಾರ್ತಿಯರನ್ನು ತಂಡವನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅದರಲ್ಲಿ 6 ವಿದೇಶಿ ಆಟಗಾರ್ತಿಯರನ್ನು ಕಡ್ಡಾಯವಾಗಿ ಉಳಿಸಿಕೊಳ್ಳಲೇಬೇಕು. ಹೀಗಾಗಿ ಡ್ಯಾನಿ ವ್ಯಾಟ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಟ್ರೆಡಿಂಗ್ ಮೂಲಕ ಖರೀದಿಸಿದ್ದ ಆರ್ಸಿಬಿ ಪಾಳದಲ್ಲಿ ವಿದೇಶಿ ಆಟಗಾರ್ತಿಯರ ಸಂಖ್ಯೆ 8 ಕ್ಕೆ ಏರಿತ್ತು. ಆದ್ದರಿಂದ ಆರ್ಸಿಬಿ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಮತ್ತು ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಆರ್ಸಿಬಿಯಿಂದ ಹೊರಬಿದ್ದ ಆಟಗಾರ್ತಿಯರಿವರು
ದಿಶಾ ಕಸತ್
ಇಂದ್ರಾಣಿ ರಾಯ್
ನಾಡಿನ್ ಡಿ ಕ್ಲರ್ಕ್
ಶುಭಾ ಸತೀಶ್
ಶ್ರದ್ಧಾ ಪೋಕರ್ಕರ್
ಸಿಮ್ರಾನ್ ಬಹದ್ದೂರ್
ಹೀದರ್ ನೈಟ್
ಆರ್ಸಿಬಿಯಲ್ಲೇ ಉಳಿದವರಿವರು
ಸ್ಮೃತಿ ಮಂಧಾನ
ಎಲ್ಲಿಸ್ ಪೆರ್ರಿ
ರಿಚಾ ಘೋಷ್
ಸಬ್ಬಿನೇನಿ ಮೇಘನಾ
ಶ್ರೇಯಾಂಕಾ ಪಾಟೀಲ್
ಜಾರ್ಜಿಯಾ ವಾರೆಹಮ್
ಆಶಾ ಸೋಭಾನಾ
ರೇಣುಕಾ ಸಿಂಗ್
ಸೋಫಿ ಡಿವೈನ್
ಸೋಫಿ ಮೊಲಿನೆಕ್ಸ್
ಏಕ್ತಾ ಬಿಶ್ತ್
ಕನಿಕಾ ಅಹುಜಾ
ಕೇಟ್ ಕ್ರಾಸ್
ಡೇನಿಯಲ್ ವ್ಯಾಟ್