ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವುದೇ ಅಡೆತಡೆಗಳಿಲ್ಲದೆ ಈ ಸೀಸನ್ನ ಫೈನಲ್ಗೇರಿದೆ.
ಇತ್ತ ಲೀಗ್ನ ಕೊನೆಯ ಪಂದ್ಯದಲ್ಲೂ ಸೋತ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಪ್ಲೇ ಆಫ್ಗೆ ಏರಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 13.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಗುಜರಾತ್ ನೀಡಿದ 129 ರನ್ಗಳ ಅಲ್ಪಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಎಂದಿನಂತೆ ಅಬ್ಬರದ ಆರಂಭ ಪಡೆದುಕೊಂಡಿತು. ನಾಯಕಿ ಮೆಗ್ ಲ್ಯಾನಿಂಗ್ 18 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಅದಾಗ್ಯೂ ಸ್ಫೋಟಕ ಓಪನರ್ ಶಫಾಲಿ ವರ್ಮಾ ಅರ್ಧಶತಕ ಸಿಡಿಸಿದಲ್ಲದೆ ತಂಡವನ್ನು ಸುಲಭವಾಗಿ ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ಶಫಾಲಿ ಅವರ ಇನ್ನಿಂಗ್ಸ್ 71 ರನ್ಗಳಿಗೆ ಕೊನೆಗೊಂಡಿತು. ಶಫಾಲಿಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರಾಡ್ರಿಗಸ್ ಕೂಡ ಅಜೇಯ 38 ರನ್ಗಳ ಇನ್ನಿಂಗ್ಸ್ ಆಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡಕ್ಕೆ ಮತ್ತೆ ಅದೇ ಕಳಪೆ ಆರಂಭ ಸಿಕ್ಕಿತು. ನಾಯಕಿ ಬೆತ್ ಮೂನಿ ಈ ಬಾರಿ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಲಾರಾ ವೊಲ್ವಾರ್ಡ್ಟ್ 7 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಹೇಮಲತಾ 4 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕೆಳಕ್ರಮಾಂಕದಲ್ಲಿ ಹೋರಾಟದ ಇನ್ನಿಂಗ್ಸ್ ಆಡಿದ ಭಾರತಿ ಫುಲ್ಮಾಲಿ 42 ರನ್ಗಳ ಕಾಣಿಕೆ ನೀಡಿದರು. ಕ್ಯಾಥರಿನ್ ಎಮ್ಮಾ ಬ್ರೈಸ್ ಕೂಡ 28 ರನ್ ಹಾಗೂ ಫೋಬೆ ಲಿಚ್ಫೀಲ್ಡ್ 21 ರನ್ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡ ಅಲ್ಪ ರನ್ಗಳ ಟಾರ್ಗೆಟ್ ನೀಡಿತು.