ಬೆಂಗಳೂರು: ಭಾರತ ವಿಶ್ಕಪ್ ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ನಗರದ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮ್ಮನವರ ಜೊತೆ ತ್ರಿವರ್ಣ ಧ್ವಜ ಇಟ್ಟು ಪ್ರಾರ್ಥನೆ ಭಕ್ತರು ಕೂಡ ವಿಶೇಷ ಪೂಜೆ ಸಲ್ಲಿಸಿದರು.
ಹಾಗೆ ದೇವರಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದು ಪ್ರಾರ್ಥಿಸಿದರು. ಎರಡು ಬಾರಿ ಈಗಾಗಲೇ ಭಾರತ ವಿಶ್ವಕಪ್ ಗೆದ್ದಿದೆ, ಭಾರತ ತಂಡದಲ್ಲಿ ಅದ್ಭುತವಾದ ಆಟಗಾರರು ಇದ್ದಾರೆ. ಈ ನಿಟ್ಟಿನಲ್ಲಿ ಭಾರತ ತಂಡಕ್ಕೆ ನಾವೆಲ್ಲರೂ ಶುಭಹಾರೈಸುತ್ತೇವೆ ಎಂದು ಘೋಷಣೆ ಕೂಗಿದರು.