2023ರ ವಿಶ್ವಕಪ್ ಫೈನಲ್ ಪಂದ್ಯ ಕೊನೆಗೊಂಡಿದ್ದು ಆದರೆ ಕ್ರಿಕೆಟ್ ಅಭಿಮಾನಿಗಳಿಗಾಗಿ ಮುಂಬರುವ ವಿಶ್ವಕಪ್ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಮುಂಬರುವ ವಿಶ್ವಕಪ್ನಲ್ಲಿ ನಮೀಬಿಯಾ ಅತಿಥೇಯ ರಾಷ್ಟ್ರವಾಗಿ ಪಾದರ್ಪಣೆ ಮಾಡಲು ಸಜ್ಜಾಗಿದೆ. ಹೀಗಾಗಿ 2027ರ ವಿಶ್ವಕಪ್ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ.
ಐಸಿಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ದಕ್ಷಿಣಾ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಅತಿಥೇಯರಾ್ಇ ಕಾರ್ಯ ನಿರ್ವಹಿಸಲಿದೆ. ODI ಶ್ರೇಯಾಂಕದಲ್ಲಿ ಅಗ್ರ 8 ತಂಡಗಳು ಅರ್ಹತೆ ಪಡೆಯುತ್ತವೆ. ಉಳಿದ 4 ಸ್ಥಾನಗಳು ಜಾಗತಿಕ ಅರ್ಹತಾ ಪಂದ್ಯಾವಳಿ ಮೂಲಕ ನಿರ್ಧರಿಸಲಾಗುತ್ತದೆ.ನಮೀಬಿಯಾ ವಿಶ್ವಕಪ್ ಆಯೋಜನೆಯ ಹೊರತಾಗಿಯೂ, ಸದಸ್ಯತ್ವ ಹೊಂದಿರದ ಕಾರಣ ಅದರ ಭಾಗವಹಿಸುವಿಕೆ ಇನ್ನೂ ಖಚಿತವಾಗಿಲ್ಲ ಎಂದಿದೆ.
2027ರ ವಿಶ್ವಕಪ್ ಪಂದ್ಯ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ 2003ರಲ್ಲಿ ನಡೆದ ಪಂದ್ಯದಂತೆ ದಕ್ಷಿಣಾ ಆಫ್ರಿಕಾದ 12 ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯ ನಡೆಯಲಿಕ್ಕಿದೆ ಎನ್ನಲಾಗುತ್ತಿದೆ. ಅಂದು ಜಿಂಬಾಬ್ವೆಯಲ್ಲಿ ಎರಡು ಮತ್ತು ಕೀನ್ಯಾದಲ್ಲಿ ಒಂದು ಪಂದ್ಯ ಆಯೋಜಿಸಲಾಗಿತ್ತು.