ಗುಜರಾತ್ : ಇಂದು ವಿಶ್ವವನ್ಯ ಜೀವಿದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗಿರ್ ಅಭಯಾರಣ್ಯದಲ್ಲಿ ಸಿಂಹ ಸಫಾರಿ ನಡೆಸಿದರು.
ಗುಜರಾತ್ ನ ಜುನಾಗಢದ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿ ಕೈಗೊಂಡ ಮೋದಿ ಅವರು ತಮ್ಮ ಹೆಳಯ ನೆನಪುಗಳನ್ನು ಮೆಲಕು ಹಾಕಿದರು. ಸುಂದರ ಕ್ಷಣಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದರುವ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ `ನಮ್ಮ ಗ್ರಹದ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ” ಮುಂದುವರಿದು… ಪ್ರತಿಯೊಂದು ಪ್ರಭೇದವೂ ಪ್ರಮುಖ ಪಾತ್ರವಹಿಸುತ್ತದೆ. ಮುಂದಿನ ಪೀಳಿಗೆಗೆ ಅವುಗಳನ್ನ ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ಸಲುವಾಗಿ ಭಾರತ ಕೈಗೊಂಡ ಕೊಡುಗೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದಿದ್ದಾರೆ.
ಗುಜರಾತ್ನಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚುತ್ತಿದ್ದು, 2015ರಲ್ಲಿ 523 ಇದ್ದ ಏಷ್ಯಾಟಿಕ್ ಸಿಂಹಗಳ ಸಂಖ್ಯೆ 2020ರಲ್ಲಿ 674ಕ್ಕೆ ಏರಿಕೆ ಕಂಡಿದೆ. ಹೀಗಾಗಿ ಸರ್ಕಾರವು ಏಷ್ಯಾಟಿಕ್ ಸಿಂಹಗಳ ರಕ್ಷಣೆಗಾಗಿ ಗಿರ್ ಅಭಯಾರಣ್ಯದಲ್ಲಿ ಪ್ರಾಜೆಕ್ಟ್ ಲಯನ್ ಯೋಜನೆ ಜಾರಿಗೆ ತಂದಿದೆ.