ಕಲಬುರಗಿ :-ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಾಳೆ ಅಹಮದಾಬಾದನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಾವಳಿಯ ನೇರ ಪ್ರಸಾರದ ವೀಕ್ಷಣೆ ವ್ಯವಸ್ಥೆಯನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಾಡಲಾಗಿದೆ.
ಹೀಗಾಗಿ ಸಾರ್ವಜನಿಕರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯ ವೀಕ್ಷಿಸಬೇಕೆಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.
ವೀಕ್ಷಣೆಗೆ LED ಪರದೆ ಮತ್ತು ಸೌಂಡ್ ಸಿಸ್ಟಮ್ ಅಳವಡಿಸಿಲಾಗಿದೆ ಎಂದಿದ್ದಾರೆ…