ಇಂದಿನಿಂದ ಸೂಪರ್-8 ಸುತ್ತಿನ ಕಾದಾಟ ಶುರುವಾಗಲಿದೆ. ಸೂಪರ್-8 ಎಂದು ಕರೆಯಲಾಗುವ ಈ ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್-1 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡರೆ, ಗ್ರೂಪ್-2 ರಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್ ತಂಡಗಳಿವೆ.
ಚಾಮರಾಜನಗರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ರೈತ ಸಂಘ ವಿರೋಧ!
ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿಯಲಿದೆ. ಇನ್ನು ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಕಾದಾಟ ನಡೆಸಲಿದೆ.
ಎರಡು ಗುಂಪುಗಳಲ್ಲಿರುವ ತಂಡಗಳು:
ಗ್ರೂಪ್-1
ಭಾರತ
ಆಸ್ಟ್ರೇಲಿಯಾ
ಅಫ್ಘಾನಿಸ್ತಾನ್
ಬಾಂಗ್ಲಾದೇಶ್
ಗ್ರೂಪ್-2
ಯುಎಸ್ಎ
ವೆಸ್ಟ್ ಇಂಡೀಸ್
ಸೌತ್ ಆಫ್ರಿಕಾ
ಇಂಗ್ಲೆಂಡ್