ನವದೆಹಲಿ:- 18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಗುಕೇಶ್ ಸಾಧನೆಯನ್ನು ಪ್ರಧಾನಿ ಮೋದಿ ಅವರು, ಕೊಂಡಾಡಿದ್ದಾರೆ.
ಡಿ.16 ರವರೆಗೆ ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ!
ಗುಕೇಶ್ ಐತಿಹಾಸಿಕ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಐತಿಹಾಸಿಕ ಮತ್ತು ಅನುಕರಣೀಯ! ಡಿ ಗುಕೇಶ್ ಅವರ ಗಮನಾರ್ಹ ಸಾಧನೆಗೆ ಅಭಿನಂದನೆಗಳು. ಇದು ಅವರ ಅನನ್ಯ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ದೃಢಸಂಕಲ್ಪದ ಫಲ. ಅವರ ಗೆಲುವು ಚೆಸ್ ಇತಿಹಾಸದಲ್ಲಿ ಅವರ ಹೆಸರನ್ನು ಸ್ಮರಣೀಯಗೊಳಿಸಿರುವುದು ಮಾತ್ರವಲ್ಲದೆ ಲಕ್ಷಾಂತರ ಯುವ ಮನಸ್ಸುಗಳು ದೊಡ್ಡ ಕನಸು ಕಾಣಲು ಪ್ರೇರೇಪಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.