ಲಕ್ನೋ: ಐಸಿಸ್ (ISIS) ಪರವಾಗಿ ಕೆಲಸ ಮಾಡುತ್ತಿದ್ದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ (Aligarh Muslim University) ಆರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳದ (ATS) ಪೊಲೀಸರು ಬಂಧಿಸಿ ದ್ದಾರೆ. ಆರು ವ್ಯಕ್ತಿಗಳನ್ನು ಬಂಧಿಸುವುದರೊಂದಿಗೆ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಭಯೋತ್ಪಾದಕ ಜಾಲವು ಬೆಳಕಿಗೆ ಬಂದಿದೆ. ಆರು ಮಂದಿಯಲ್ಲಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಎಲ್ಲಾ ಬಂಧಿತ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯೊಂದಿಗೆ (Student Union) ಸಂಬಂಧ ಹೊಂದಿದ್ದರು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಬಂಧಿತ ಆರೋಪಿಗಳು ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ವಿದ್ಯಾರ್ಥಿ ಸಂಘದ ಸಭೆಗಳು ಐಸಿಸ್ನ ಹೊಸ ನೇಮಕಾತಿ ಸೆಲ್ ಆಗಿ ಮಾರ್ಪಟ್ಟಿವೆ ಎಂದು ಹೇಳಿಕೊಂಡಿದೆ. ಮೂಲಗಳ ಪ್ರಕಾರ, ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈಗ ಕೇಂದ್ರೀಯ ತನಿಖಾ ಸಂಸ್ಥೆಗಳ ನಿಗಾದಲ್ಲಿದ್ದಾರೆ.