ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು ಸಿಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆಯೆ ಕಾರಣ ಎನ್ನಲಾಗಿದೆ.
ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ “ಉಸಿರೇ ಉಸಿರೇ” ಚಿತ್ರ ಮೇ 3 ರಂದು ತೆರೆಗೆ!
ಹೌದು, ನಾಲ್ಕೈದು ಗಂಟೆ ಪ್ರಚಾರ ಮಾಡಿದ್ರೆ ಕೈ ತುಂಬಾ ಕಾಸು, ಹೊಟ್ಟೆ ತುಂಬ ಬಿರಿಯಾನಿ, ರಾತ್ರಿಗೆ ಕ್ವಾಟರ್ ಮದ್ಯ ಸಿಗುತ್ತದಂತೆ. ಜತೆಗೆ ಮನೆಗೆ ಒಂದೋ ಎರಡೋ ಗಿಫ್ಟ್ ಕೂಡ ದೊರೆಯುತ್ತದೆ. ಹೀಗಾಗಿ ಕಾರ್ಮಿಕರು ಕೆಲಸ ಬಿಟ್ಟು ಪ್ರಚಾರ ಕಾರ್ಯದತ್ತ ಆಕರ್ಷಿತರಾಗಿದ್ದಾರೆ.
ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳ ಪ್ರಚಾರಕ್ಕಾಗಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುತ್ತಿರುವುದಕ್ಕೆ, ರಾಜಧಾನಿ ಬೆಂಗಳೂರಲ್ಲಿ ಮನೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ಸದ್ಯ ಕಾರ್ಮಿಕರು ಸಿಗುತ್ತಿಲ್ಲ. ಗಾರೆ ಕೆಲಸ, ಇಟ್ಟಿಗೆ ಕೆಲಸ, ಸಿಮೆಂಟ್ ಕಾಂಕ್ರೀಟ್ ಕೆಲಸ, ಪೇಂಟರ್, ಕಾರ್ಪೆಂಟರ್ಗಳ ಸಹಾಯಕರಿಗೆ ದಿನವೊಂದಕ್ಕೆ 500 ರೂ. ಸಂಬಳ ಸಿಗುತ್ತಿದೆ. ರಾಜಕೀಯ ಪಕ್ಷಗಳ ಬೆಂಬಲಿಗರು ಕಾರ್ಮಿಕರನ್ನು ಕರೆದೊಯ್ದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು 500 ರಿಂದ 1000 ರುಪಾಯಿವರೆಗೆ ನೀಡುತ್ತಾರೆ. ಹೀಗಾಗಿ ಮೂರು ವಾರಗಳಿಂದ ಕಾರ್ಮಿಕರೆಲ್ಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ.
ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಬೇಕು. ಪ್ರತಿದಿನ ಇಂತಿಷ್ಟು ಮನೆಗಳಿಗೆ ಕರ ಪತ್ರಗಳನ್ನು ಹಂಚಬೇಕು. ಬೆಳಗ್ಗೆಯಿಂದ ಸಂಜೆ ವರೆಗೆ ಮನೆ ಮನೆಗೆ ಕರಪತ್ರ ಹಂಚಿದರೆ ಸಂಜೆ ಕೈ ತುಂಬಾ ಕಾಸು ಸಿಗುತ್ತದೆ. ಎರಡರಿಂದ ಮೂರು ವಾರ ಶ್ರಮವಿಲ್ಲದ ಕೆಲಸವೆಂಬುದನ್ನು ಅರಿತು, ಲಕ್ಷಾಂತರ ಕಾರ್ಮಿಕರು ಪ್ರಚಾರ ಕಾರ್ಯಕ್ಕೆ ಹೋಗಿದ್ದಾರೆ. ಇದರಿಂದ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಮನೆ, ಕಟ್ಟಡ, ಅಪಾರ್ಮೆಂಟ್ಗಳ ನಿರ್ಮಾಣ, ಹಲವೆಡೆ ನಿಂತು ಹೋಗಿದೆ.
ಪ್ರತಿದಿನ ಕೆಲಸಕ್ಕೆ ಹೋಗಿ ಶ್ರಮ ವಹಿಸುವ ಗಂಡಾಳಿಗೆ 500 ರಿಂದ 750 ರೂ. ವರೆಗೆ ಕೂಲಿ ಸಿಗುತ್ತದೆ. ಹೆಣ್ಣಾಳಿಗೆ 400 ರಿಂದ 600ರ ವರೆಗೆ ಕೂಲಿ ದೊರೆಯುತ್ತದೆ. ಆದರೆ ಚುನಾವಣಾ ಪ್ರಚಾರದಲ್ಲಿ ತಲೆಯ ಮೇಲೆ ಪಕ್ಷಗಳ ಟೋಪಿ ಧರಿಸಿ ಹೆಗಲಮೇಲೊಂದು ಶಾಲು ಹಾಕಿಕೊಂಡು, ಕೈಯಲ್ಲಿ ಕರಪತ್ರ ಹಿಡಿದುಕೊಂಡು, ಮನೆ ಮನೆಗೆ ಹೋಗಿ ಕೊಟ್ಟು ಬಂದರೆ ಆಯ್ತು. ಅಥವಾ ಪಕ್ಷಗಳ ಮುಖಂಡರು ಆಯೋಜಿಸುವ ಸಭೆ ಸಮಾರಂಭ, ಮೆರವಣಿಗೆಗಳಿಗೆ ಬಾವುಟ ಹಿಡಿದುಕೊಂಡು ಹೋಗಿ ಘೋಷಣೆಗಳನ್ನು ಕೂಗಿ ಬಂದರೆ ಸಾಕು. ಊಟ, ತಿಂಡಿ ಆ ದಿನದ ಕೂಲಿ ಸುಲಭವಾಗಿ ಸಿಗುತ್ತದೆ. ಹೀಗಾಗಿ, ಬಹುತೇಕ ಕೂಲಿ ಕಾರ್ಮಿಕರು ಪ್ರಚಾರ ಕಾರ್ಯಕ್ಕೆ ತೆರಳಿದ್ದಾರೆ ಎಂದು ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ರವಿ ಹೇಳಿದ್ದಾರೆ.